ಸೋಲು-ಗೆಲುವಿನ ಹಾದಿಯಲ್ಲಿ 'ಧುರಂಧರ್' ಸಂಭ್ರಮ: ಯುವ ನಟರಿಗೆ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ಅರ್ಜುನ್ ರಾಂಪಾಲ್! Arjun Rampal

ಚಿತ್ರ Instagram
ಚಿತ್ರ Instagram
Published on
ಮುಂಬೈ: ಬಾಲಿವುಡ್‌ ನಟ ಅರ್ಜುನ್​ ರಾಂಪಾಲ್​ (Arjun Rampal) 2001ರ 'ಮೋಕ್ಷ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದಶಕಗಳೇ ಕಳೆದಿವೆ. ತಮ್ಮ ವಿಭಿನ್ನ ನಟನೆ ಮತ್ತು ಆಕರ್ಷಕ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಅವರು ತಮ್ಮ ಸುದೀರ್ಘ ಚಲನಚಿತ್ರ ಪ್ರಯಾಣವನ್ನು ಪ್ರತಿಬಿಂಬಿಸುವ ಭಾವನಾತ್ಮಕ ಟಿಪ್ಪಣಿಯೊಂದನ್ನು ಹಂಚಿಕೊಂಡಿದ್ದಾರೆ.
ಅರ್ಜುನ್​ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮೊದಲ ಚಿತ್ರ ಮೋಕ್ಷದಿಂದ ಹಿಡಿದು ಬ್ಲಾಕ್‌ಬಸ್ಟರ್ 'ಧುರಂಧರ್ 2' ವರೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹಮ್ಜಾ ಮತ್ತು ಮೇಜರ್ ಇಕ್ಬಾಲ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಅರ್ಜುನ್​ ತಮ್ಮ ಪೋಸ್ಟ್‌ನಲ್ಲಿ ಧುರಂಧರ್ ಕುಟುಂಬವನ್ನು ಉಲ್ಲೇಖಿಸಿದ್ದು, ಜಸ್ಕಿರತ್ ಸಿಂಗ್ ರಂಗಿ ಮತ್ತು ಹಮ್ಜಾ ಅಲಿ ಮಜಾರಿ ಪಾತ್ರಕ್ಕಾಗಿ ತಮ್ಮ ಸಹನಟ ರಣವೀರ್ ಸಿಂಗ್ ಅವರನ್ನು 'ಬಬ್ಬರ್ ಶೇರ್' ಎಂದು ಬಣ್ಣಿಸಿದ್ದಾರೆ.

ಧುರಂಧರ್ ಫ್ರಾಂಚೈಸಿ ಯಶಸ್ಸಿನ ಬಗ್ಗೆ ಪ್ರತಿಬಿಂಬಿಸಿದ ಅರ್ಜುನ್!

ಅವರು ಹಂಚಿಕೊಂಡಿರುವ ಒಂದು ಚಿತ್ರದಲ್ಲಿ , ಅರ್ಜುನ್ ಪಾತ್ರಧಾರಿ ಮೇಜರ್ ಇಕ್ಬಾಲ್, ರಣವೀರ್ ಸಿಂಗ್ ಪಾತ್ರಧಾರಿ ಹಮ್ಜಾ ಜೊತೆ ಕೈಕುಲುಕುತ್ತಾ ನಗುತ್ತಿರುವುದನ್ನು ಕಾಣಬಹುದು. ಇನ್ನೊಂದು ಚಿತ್ರದಲ್ಲಿ ಇಬ್ಬರೂ ಸಂಭಾಷಣೆಯಲ್ಲಿ ತೊಡಗಿರುವುದನ್ನು ಸೆರೆಹಿಡಿಯಲಾಗಿದೆ. ಇದರ ನಡುವೆ ಧುರಂಧರ್ 2 ಸೆಟ್‌ಗಳ ಹಲವಾರು ಚಿತ್ರಗಳನ್ನು ಅರ್ಜುನ್ ಪೋಸ್ಟ್ ಮಾಡಿದ್ದಾರೆ.
ಬಾಲ್ಯದಲ್ಲಿ ಕೌಬಾಯ್ಸ್ ಪಾತ್ರದಿಂದ ಹಿಡಿದು, ನನ್ನ ಮೊದಲ ಚಿತ್ರ ಮೋಕ್ಷ ಮತ್ತು ಈಗಿನ ಧುರಂಧರ್ ವರೆಗೆ, ಈ ಪ್ರಯಾಣದಲ್ಲಿ ನನ್ನ ಜೊತೆಯಲ್ಲಿ ನಿಂತ ಪ್ರತಿಯೊಬ್ಬರೂ ಕೂಡಾ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೆಯೇ ನನ್ನ ಪ್ರಯಾಣದುದ್ದಕ್ಕೂ ನಿಂತ ನನ್ನ ಪ್ರೀತಿಯ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪೋಸ್ಟ್​ ಹಂಚಿಕೊಂಡಿದ್ದಾರೆ.

ರಣವೀರ್ ಸಿಂಗ್ ಬಗ್ಗೆ ಅರ್ಜುನ್ ರಾಂಪಾಲ್

ತಮ್ಮ ಪೋಸ್ಟ್‌ನಲ್ಲಿ ಸಹನಟ ರಣವೀರ್ ಸಿಂಗ್ ಅವರನ್ನು ಆತ್ಮೀಯವಾಗಿ 'ಬಬ್ಬರ್ ಶೇರ್' ಎಂದು ಕರೆದು ಹೊಸ ಹಣೆಪಟ್ಟಿ ನೀಡಿದ್ದಾರೆ. ಆದಾಗ್ಯೂ, ಸಂಯಮ, ಸಮರ್ಪಣಾ ಮನೋಭಾವ ಮತ್ತು ಉತ್ಸಾಹ ಈ ಮೂರನ್ನು ಎಂದಿಗೂ ಬಿಡಬೇಡಿ, ಆಗ ನಿಮ್ಮ ಎಲ್ಲಾ ಕನಸುಗಳು ನನಸಾಗುವುದನ್ನು ನೀವೇ ನೋಡುತ್ತೀರಿ ಎಂದು ಬರೆದಿದ್ದಾರೆ.

ಅರ್ಜುನ್ ಅವರ ಚಲನಚಿತ್ರ ವೃತ್ತಿಜೀವನ

ಬಾಲಿವುಡ್‌ನ ಅತ್ಯಂತ ಆಕರ್ಷಕ ನಟರಲ್ಲಿ ಒಬ್ಬರಾದ ಅರ್ಜುನ್ ರಾಂಪಾಲ್, 2001ರಲ್ಲಿ 'ಮೋಕ್ಷ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆಂಖೇನ್', 'ಡಾನ್' ಮತ್ತು 'ಓಂ ಶಾಂತಿ ಓಂ' ನಂತಹ ಚಿತ್ರಗಳು ಇವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟವು. ವಿಶೇಷವಾಗಿ 'ರಾಕ್ ಆನ್!!' ಚಿತ್ರದ ಅಮೋಘ ನಟನೆಗಾಗಿ ಇವರು ರಾಷ್ಟ್ರ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇತ್ತೀಚಿನ 'ಧುರಂಧರ್ 2' ಚಿತ್ರದ ಯಶಸ್ಸಿನ ಮೂಲಕ ತಮ್ಮ ಸುದೀರ್ಘ ಪಯಣವನ್ನು ಮುಂದುವರಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net