ಎರಡು ಮಕ್ಕಳಾದ ಬಳಿಕ ನಿಶ್ಚಿತಾರ್ಥ..! ಅಚ್ಚರಿ ವಿಷಯ ಹಂಚಿಕೊಂಡ ಧುರಂಧರ್ ನಟ ಅರ್ಜುನ್ We are engaged

ಚಿತ್ರ Instagram
ಚಿತ್ರ Instagram
Published on
ನವದೆಹಲಿ: "ಧುರಂಧರ್" ಇತ್ತೀಚೆಗೆ ದೇಶ್ಯಾದ್ಯಂತ ತೆರೆಕಂಡಂತ ಸಿನಿಮಾ. ಇದರಲ್ಲಿ ಒಂದೊಂದು ಪಾತ್ರಧಾರಿಗಳು ನ್ಯಾಯಯುತವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ. ಅಂದಹಾಗೇ, ಸಂಭಾಷಣೆಯ ಸಂದರ್ಭವೊಂದರಲ್ಲಿ ಧುರಂಧರ್ ನಟ ಅರ್ಜುನ್ ರಾಂಪಾಲ್ ತಮ್ಮ ದೀರ್ಘಕಾಲದ ಸಂಗಾತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರೊಂದಿಗಿನ ನಿಶ್ಚಿತಾರ್ಥವನ್ನು (We are engaged) ಘೋಷಿಸುವುದರ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.
ರಿಯಾ ಚಕ್ರವರ್ತಿ ಪಾಡ್‌ಕ್ಯಾಸ್ಟ್ ಟ್ರೇಲರ್ ಅನ್ನು ಬಿಡುಗಡೆ ಮಾಡಿ, "ಪಟ್ಟಣದ ಅತ್ಯಂತ ಕೂಲ್ ದಂಪತಿಗಳಿಗೆ ಅಭಿನಂದನೆಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಈ ಸಂಭಾಷಣೆಯ ಸಮಯದಲ್ಲಿ ಅರ್ಜುನ್ ರಾಂಪಾಲ್ ದಕ್ಷಿಣ ಆಫ್ರಿಕಾದ ಮಾಡೆಲ್ ಡಿಸೈನರ್ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವೀಕ್ಷಕರಿಗೆ ತಿಳಿಸಿದ್ದಾರೆ.
ಅರ್ಜುನ್ ಮತ್ತು ಗೇಬ್ರಿಯೆಲ್ಲಾ ಹಲವಾರು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಇಬರಿಬ್ಬರು 2018ರಲ್ಲಿ ಡೇಟಿಂಗ್​ ಮಾಡಲು ಪ್ರಾರಂಭಿಸಿದರು. 2019ರಲ್ಲಿ ತಮ್ಮ ಮೊದಲ ಮಗ ಅರಿಕ್ ಮತ್ತು 2023 ರಲ್ಲಿ ಅವರ ಎರಡನೇ ಮಗ ಅರಿವ್ ಅವರನ್ನು ಸ್ವಾಗತಿಸಿದ್ದೇವೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರೀತಿ ಷರತ್ತುಗಳೊಂದಿಗೆ ಬರುತ್ತದೆ: ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ 

ಪಾಡ್​ಕಾಸ್ಟ್​ನಲ್ಲಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಪ್ರೀತಿಯ ಬಗ್ಗೆ ಮಾತನಾಡುವುದನ್ನು ನಾವು ನೋಡಬಹುದು. ಈ ಸಂದರ್ಭದಲ್ಲಿ ಅವರು ಪ್ರೀತಿ ಷರತ್ತುಗಳೊಂದಿಗೆ ಬರುತ್ತದೆ. ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸಿದರೆ, ಅವರಿಗೆ ನನ್ನ ಒಪ್ಪಿಗೆ ಮತ್ತು ಪ್ರೀತಿ ಸಿಗುತ್ತದೆ.  ಆದರೆ, ನಿಮಗೆ ಮದುವೆ ಆದಾಗ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಅರ್ಜುನ್ ನಿಜವಾಗಿಯೂ ಸೆಕ್ಸಿಯಾಗಿರುತ್ತಾನೆ ಎಂದು ಆತನನ್ನು ಬಯಸಲಿಲ್ಲ ಎಂದು ನಾನು ಹೇಳುತ್ತೇನೆ ಎಂದರು. ಅದಕ್ಕೆ ಪ್ರತಿಕ್ರಿಯೆಯಾಗಿ ಅವಳು ಸೆಕ್ಸಿಯಾಗಿರುತ್ತಾಳೆ ಎಂದು ನಾನು ಹಿಂದೆ ಹೋದೆ. ಆದರೆ, ನನಗೆ ಅರಿವಾಯಿತು ಅವರಲ್ಲಿ ಸೆಕ್ಸಿಗಿಂತ ಸ್ವಲ್ಪ ಹೆಚ್ಚಿದೆ ಎಂದರು.
ಸಂಭಾಷಣೆಯ ಸಮಯದಲ್ಲಿ, ಗೇಬ್ರಿಯೆಲ್ಲಾ, ನಾವು ಈಗ ಮದುವೆಯಾಗಿಲ್ಲ, ಇದು ಯಾರಿಗೆ ಗೊತ್ತಿದೆ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ರಾಂಪಾಲ್​, ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಇದು ರಿಯಾ ಚಕ್ರವರ್ತಿಯಿಂದ ಅಚ್ಚರಿಯ ಪ್ರತಿಕ್ರಿಯೆಗೆ ಕಾರಣವಾಯಿತು.

ಅರ್ಜುನ್ ರಾಂಪಾಲ್ ಅವರ ಮುಂದಿನ ಕೆಲಸ

53 ವರ್ಷದ ನಟ ಅರ್ಜುನ್​ ರಾಂಪಲ್​, ಇತ್ತೀಚಿಗೆ ಆದಿತ್ಯ ಧಾರ್​ ಅವರ ಧುರಂಧರ್ ಚಿತ್ರದಲ್ಲಿ ರಣವೀರ್​ ಸಿಂಗ್​, ಸಂಜಯ್​ ದತ್​, ಅಕ್ಷಯ್​ ಖನ್ನಾ ಮತ್ತು ಇತರರೊಂದಿಗೆ ಕಾಣಿಸಿಕೊಂಡಿದ್ದಾರೆ. ಮೇಜರ್​ ಇಕ್ಬಾಲ್​ ಪಾತ್ರದಲ್ಲಿ ಅವರ ಪಾತ್ರವು ವೀಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇನ್ನು ನೆಟ್‌ಫ್ಲಿಕ್ಸ್‌ನ ಕ್ರೈಮ್ ಥ್ರಿಲ್ಲರ್ ರಾಣಾ ನಾಯ್ಡು ಚಿತ್ರದಲ್ಲಿ ರಾಣಾ ದಗ್ಗುಬಾಟಿ, ವೆಂಕಟೇಶ್ ದಗ್ಗುಬಾಟಿ ಮತ್ತು ಇತರರೊಂದಿಗೆ ಕಾಣಿಸಿಕೊಂಡರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net