ಸಂಗೀತ ಲೋಕಕ್ಕೆ ಅರಿಜಿತ್ ಸಿಂಗ್ ಗುಡ್‌ಬೈ! ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ 'ಸಿಂಗಿಂಗ್ ಸೆನ್ಸೇಷನ್'? Arijit Singh

ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್
ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಹಿನ್ನಲೆ ಗಾಯನಕ್ಕೆ ಅರಿಜಿತ್​ ಸಿಂಗ್​ ವಿದಾಯ
  • ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿ
  • ಪಶ್ಚಿಮ ಬಂಗಾಳದಿಂದ ಆರಂಭಿಸಲಿದ್ದಾರಾ ರಾಜಕೀಯ ಪಯಣ?
ಬಾಲಿವುಡ್​: ಈ ಪೀಳಿಗೆ ಕಂಡ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದ ಅರಿಜಿತ್ ಸಿಂಗ್ (Arijit Singh), ಜನವರಿ 27 ರಂದು ಹಿನ್ನೆಲೆ ಗಾಯನವನ್ನು ಬಿಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.
ಹಿನ್ನಲೆ ಗಾಯನದಿಂದ ದೂರ ಸರಿದ ನಂತರ ಅಜಿರಿತ್​ ಸಿಂಗ್​ ಏನು ಮಾಡುತ್ತಾರೆ ಎಂಬ ಮಿಲಿಯನ್​ ಡಾಲರ್​ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದ್ದು, ಈ ಕುರಿತು ಹಲವಾರು ರೀತಿಯ ವದಂತಿಗಳು ಕೇಳಿ ಬರುತ್ತಿವೆ. ಮಾಧ್ಯಮ ಸಂಸ್ಥೆಯೊಂದಕ್ಕೆ ದೊರೆತ ಮಾಹಿತಿ ಪ್ರಕಾರ, ಅರಿಜಿತ್​ ಸಿಂಗ್​ ಸಂಗೀತ ಕ್ಷೇತ್ರವನ್ನು ತೊರೆದು, ತಮ್ಮದೇ ಆದ ನೂತನ ರಾಜಕೀಯ ಪಕ್ಷವನ್ನು ಸ್ಥಾಪಿಸುವ ಯೋಜನೆ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ತಮ್ಮ ರಾಜಕೀಯ ಪಕ್ಷವನ್ನು ಹುಟ್ಟೂರಾದ ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಿದ್ದಾರೆ, ಆದರೆ ಇವರು ಮುಂಬರುವ 2026 ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುವ ಬದಲು, ತಳ ಮಟ್ಟದಿಂದ ಚುನಾವಣೆಗಳ ಮೂಲಕ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅರಿಜಿತ್​ ಅವರ ರಾಜಕೀಯ ಆಕಾಂಕ್ಷೆಗಳ ವಿವರಗಳು ಇನ್ನೂ ಅಧಿಕೃತವಾಗಿ ಬಹಿರಂತವಾಗದಿದ್ದರೂ, ತಮ್ಮ ಆಪ್ತ ಸ್ನೇಹಿತ ವಲಯದಲ್ಲಿ ಅವರು ಹಲವು ಬಾರಿ ಈ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿಯಿದೆ. ವರ್ಷಕ್ಕೆ ಕೋಟಿಗಟ್ಟಲೆ ಸಂಪಾದಿಸುತ್ತಿದ್ದರೂ, ಅರಿಜಿತ್ ಸಿಂಗ್ ತಮ್ಮ ತವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಜಿಯಾಗಂಜ್‌ನಲ್ಲಿ ಜೀವನವನ್ನು ನಡೆಸುತ್ತಿರುವುದು ಈ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದೆ.

ಹಿನ್ನೆಲೆ ಗಾಯನದಿಂದ ಅರಿಜಿತ್ ಸಿಂಗ್ ನಿರ್ಗಮನ

ತಮ್ಮ ಅದ್ಭುತ ಗಾಯನದ ಮೂಲಕ ಮನೆ ಮಾತಾಗಿದ್ದ ಅರಿಜಿತ್ ಸಿಂಗ್​, ಇನ್ನು ಮುಂದೆ ಹಿನ್ನಲೆ ಗಾಯಕನಾಗಿ ನಾನು ಮುಂದುವರಿಯುದಿಲ್ಲ ಎಂದು ಮಂಗಳವಾರ (ಜ.27) ಘೋಷಿಸಿದರು.
ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಅರಿಜಿತ್​ ಸಿಂಗ್​, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ತುಂಬಾ ಪ್ರೀತಿ ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಹುದ್ದೆಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು ಎಂದು ಅವರು ಬರೆದಿದ್ದಾರೆ.
ಅರಿಜಿತ್ ಸಿಂಗ್ ತುಮ್ ಹಿ ಹೋ, ಚನ್ನ ಮೇರಿಯಾ, ಅಗರ್ ತುಮ್ ಸಾಥ್ ಹೋ, ರಾಬ್ತಾ, ಕೇಸರಿಯಾ, ಏ ದಿಲ್ ಹೈ ಮುಷ್ಕಿಲ್ ಮತ್ತು ತುಜೆ ಕಿತ್ನಾ ಚಾಹ್ನೆ ಲಗೇ ಸೇರಿದಂತೆ ಅಸಂಖ್ಯಾತ ಐಕಾನಿಕ್ ಹಾಡುಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ವಿಶಾಲ್ ಭಾರದ್ವಾಜ್ ಅವರ ಮುಂಬರುವ 'ಓ ರೋಮಿಯೋ' ಚಿತ್ರದ 'ಹಮ್ ತೋ ತೇರೆ ಹಿ ಲಿಯೇ ದೆ' ಚಿತ್ರದಲ್ಲೂ ಅವರು ಕಾಣಿಸಿಕೊಳ್ಳಬೇಕಿತ್ತು. ಅವರ ಇತ್ತೀಚಿನ ಬಿಡುಗಡೆ 'ಬಾರ್ಡರ್ 2' ಚಿತ್ರದ 'ಘರ್ ಕಬ್ ಆವೋಗೆ' ಅವರ ವೃತ್ತಿ ಜೀವನದ ಕೊನೆಯ ಹಿನ್ನಲೆ ಗಾಯನ ಎಂದು ಹೇಳಬಹುದು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net