ಮನೋಜ್ ಎನ್.ಎಸ್ ನಿರ್ದೇಶನದ ಈ ಕಾಮಿಡಿ ಚಿತ್ರವನ್ನು ಬಿಹೈಂಡ್‌ವುಡ್ಸ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಪ್ರಭುದೇವ ಅವರು 'ಬಾಬೂಟ್ಟಿ' ಎಂಬ ಯುವ ಕೊರಿಯಾಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ರಹಮಾನ್ ಅವರು ಮೊದಲು 'ಮಯಿಲೆ' ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈ ಹಾಡು ಚಿತ್ರೀಕರಣದ ಸಂದರ್ಭದಲ್ಲಿ ರಹಮಾನ್ ಅವರ ನಟನಾ ಕೌಶಲ ನೋಡಿ ಮೆಚ್ಚಿದ ನಿರ್ದೇಶಕ ಮನೋಜ್, ಹಾಡಿನ ನಂತರ ವಿಸ್ತೃತ ಪಾತ್ರವನ್ನು ನೀಡಿದ್ದಾರೆ. ರಹಮಾನ್ ಅವರು ತಕ್ಷಣವೇ ಒಪ್ಪಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.