ಸಲ್ಮಾನ್ ನಾಲಿಗೆ ಹರಿಬಿಟ್ಟಾಗ ಸುಮ್ಮನಿರಲಿಲ್ಲ ಅನುಷ್ಕಾ!...ಅಷ್ಟಕ್ಕೂ ಬಾಲಿವುಡ್ ಭಾಯ್ ಜಾನ್ ಮಾಡಿದ ತಪ್ಪಾದರು ಏನು...? Anushka Sharma

Anushka Sharma (ಚಿತ್ರ Instagram)
Anushka Sharma (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • 2016 ರಲ್ಲಿ ಬಾಲಿವುಡ್ ಅಂಗಳದಲ್ಲಿ ಎಲ್ಲಿ ನೋಡಿದರೂ 'ಸುಲ್ತಾನ್' ಹೆಸರೇ ಮಾರ್ದನಿಸುತ್ತಿತ್ತು
  • ನಟ ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಂಚಲನ ಮೂಡಿಸಿತ್ತು
  • ಸಲ್ಮಾನ್ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆಯೊಂದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣ
Anushka Sharma: 2016 ರಲ್ಲಿ ಬಾಲಿವುಡ್ ಅಂಗಳದಲ್ಲಿ ಎಲ್ಲಿ ನೋಡಿದರೂ 'ಸುಲ್ತಾನ್' ಹೆಸರೇ ಮಾರ್ದನಿಸುತ್ತಿತ್ತು. ನಟ ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ, ಚಿತ್ರದ ಪ್ರಚಾರದ ಸಮಯದಲ್ಲಿ ಸಲ್ಮಾನ್ ಖಾನ್ ನೀಡಿದ ವಿವಾದಾತ್ಮಕ ಹೇಳಿಕೆಯೊಂದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ಆ ಹಳೆಯ ಸುದ್ದಿ ಮತ್ತೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಲ್ಮಾನ್ ಖಾನ್ ನೀಡಿದ ಹೇಳಿಕೆ ಏನಾಗಿತ್ತು?

ಚಿತ್ರೀಕರಣದ ಸಮಯದಲ್ಲಿ ಸತತವಾಗಿ ಕುಸ್ತಿ ಪಟ್ಟುಗಳನ್ನು ಅಭ್ಯಾಸ ಮಾಡಿ, ದೈಹಿಕವಾಗಿ ದಣಿದಿರುವುದರ ಬಗ್ಗೆ ಮಾತನಾಡಿದ ಸಲ್ಮಾನ್​ ಖಾನ್ ​ಆ ತರಬೇತಿ ಮುಗಿಸಿ ರಿಂಗ್‌ನಿಂದ ಹೊರಬರುವಾಗ ನನಗೆ ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ (Raped woman) ಭಾಸವಾಗುತ್ತಿತ್ತು ಎಂದು ಹೇಳಿದ್ದರು. ಈ ಮಾತು ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಉಂಟಾಯಿತು.

ಅನುಷ್ಕಾ ಶರ್ಮಾ ಅವರ ದಿಟ್ಟ ಪ್ರತಿಕ್ರಿಯೆ

ಸುಲ್ತಾನ್' ಚಿತ್ರದ ವೇಳೆ "ನನಗೆ ಅತ್ಯಾಚಾರಕ್ಕೊಳಗಾದ ಮಹಿಳೆಯಂತೆ ಭಾಸವಾಗುತ್ತಿತ್ತು" ಎಂಬ ಸಲ್ಮಾನ್ ಖಾನ್ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ ಅನುಷ್ಕಾ ಶರ್ಮಾ ಈ ಮಾತು ಸಂವೇದನಾ ರಹಿತವಾಗಿದೆ. ಈ ವಿಚಾರಕ್ಕಾಗಿ ಅವರ ತಂದೆ ಸಲೀಂ ಖಾನ್ ಕ್ಷಮೆಯಾಚಿಸಿದರೇ ಹೊರತು ಸಲ್ಮಾನ್ ಅಲ್ಲ. ಬದಲಾಗಿ ಅವರು 4 ವರ್ಷದ ಮಗುವಿನಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಆದಾಗ್ಯೂ, ಸಲ್ಮಾನ್​ ಖಾನ್​ ತುಂಬಾ ಬೆದರಿಸುವ ವ್ಯಕ್ತಿತ್ವದವರು. ಅಲ್ಲದೇ ಅವರು ಅಹಂಕಾರ ಮತ್ತು ಬೃಹತ್​ ಮಟ್ಟದ ಪ್ರಚಾರದ ಬೆಂಬಲವನ್ನು ಹೊಂದಿರುವಂತ ಕೆಟ್ಟ ವ್ಯಕ್ತಿ. ಅದರಲ್ಲೂ ಮಹಿಳೆಯರ ವಿಷಯದಲ್ಲಿ ಎಂದು ಹೇಳಿದ್ದರು.
ಆದಾಗ್ಯೂ, ಕತ್ರಿನಾ ಸೆಟ್​ಗೆ ತಡವಾಗಿ ಬರುತ್ತಿದ್ದಾಗ ನಾನು ಆಕೆಗೆ ಕಪಾಳ ಮೋಕ್ಷ ಮಾಡಿದ್ದೆ ಎಂದು ಸಲ್ಮಾನ್​ ನಮ್ಮ ಮುಂದೆ ಹೇಳಿದಾಗ ಕತ್ರಿನಾ ನಾಚಿಕೆಯಿಲ್ಲದೆ ನಗುತ್ತಿದ್ದರು. ಈ ರೀತಿಯ ಹೇಳಿಕೆಗಳು ಸಲ್ಮಾನ್ ಅವರಂತಹ ದೊಡ್ಡ ತಾರೆಯ ಜೊತೆ ನಟಿಸುತ್ತಿದ್ದರೂ, ತಪ್ಪು ತಪ್ಪೇ ಎಂದು ಧ್ವನಿ ಎತ್ತಿದ ಅನುಷ್ಕಾ ಅವರ ಧೈರ್ಯಕ್ಕೆ ಆಗ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net