ನಾನು ಬದ್ಧತೆ ಇರುವ ಮನುಷ್ಯ: ಧುರಂಧರ್ ಸಿನಿಮಾವನ್ನು ತಿರಸ್ಕರಿಸಿದ ಕುರಿತು ಅನಿಲ್​ ಕಪೂರ್​ ಹೇಳಿದ್ದೇನು?Anil Kapoor on Rejecting Dhurandhar

 ಬಾಲಿವುಡ್​ನ ಹಿರಿಯ ಕಲಾವಿದ ಅನಿಲ್​ ಕಪೂರ್​ (Anil Kapoor on Rejecting Dhurandhar)
ಬಾಲಿವುಡ್​ನ ಹಿರಿಯ ಕಲಾವಿದ ಅನಿಲ್​ ಕಪೂರ್​ (Anil Kapoor on Rejecting Dhurandhar)
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 19ಕ್ಕೆ ತೆರೆಕಾಣಲಿರುವ ಸಿನಿಮಾ ಧುರಂಧರ್ 2
  • ಧುರಂಧರ್​ ಸಿನಿಮಾವನ್ನು ತಿರಸ್ಕರಿಸಿದ ಕುರಿತು ಮೌನ ಮುರಿದ ಅನಿಲ್​ ಕಪೂರ್​
  • ನಾನು ಬದ್ಧತೆಯಿಂದ ಈ ಹಂತ ತಲುಪಿದ್ದೇನೆ: ಬಾಲಿವುಡ್​ ನಟ
ಮುಂಬೈ: ಮಾರ್ಚ್​ 19 ಭಾರತೀಯ ಸಿನಿ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನವಾಗಲಿದ್ದು, ಅಂದು ದೇಶದ ಪ್ರತಿ ದೇಶಪ್ರೇಮಿ ಕಾಯುತ್ತಿರುವ, ಧುರಂಧರ್​ 2 ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದ್ದು, ಜೊತೆಗೆ ಈಗಿನಿಂದಲೇ ಈ ಸಿನಿಮಾದ ಟಿಕೆಟ್​ಗಾಗಿ ಜನ ಮುಗಿ ಬೀಳುತ್ತಿದ್ದಾರೆ.
ಆದರೆ ಈ ಸಿನಿಮಾದ ಬಗ್ಗೆ ಇತ್ತೀಚೆಗೆ ಬಾಲಿವುಡ್​ನ ಹಿರಿಯ ಕಲಾವಿದ ಅನಿಲ್​ ಕಪೂರ್​ (Anil Kapoor on Rejecting Dhurandhar) ನೀಡಿರುವ ಹೇಳಿಕೆಯೊಂದು ಸಖತ್​ ಸುದ್ದಿ ಮಾಡುತ್ತಿದೆ.

ನಾನು ಈ ಸಿನಿಮಾವನ್ನು ನಿರಾಕರಿಸಿದ್ದು ಯಾಕೆ ಗೊತ್ತಾ?

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅನಿಲ್​ ಕಪೂರ್​, ಧುರಂಧರ್​ ನಿರ್ದೇಶಕ, ಆದಿತ್ಯ ಧರ್​ ತನ್ನ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರವನ್ನು ಮಾಡಲು ನನಗೆ ಕೇಳಿದ್ದರು. ಆದರೆ ನಾನು ಆಗಲೇ ಬೇರೊಂದು ಸಿನಿಮಾದಲ್ಲಿ ನಿರತನಾಗಿದ್ದರಿಂದ ಈ ಸಿನಿಮಾದಲ್ಲಿ ಅಭಿನಯಿಸಲಾಗಲಿಲ್ಲ ಎಂದಿದ್ದಾರೆ.
ನಾನು ಬದ್ಧತೆವುಳ್ಳ ಮನುಷ್ಯ!
ನಾನು ಈ ಸಿನಿಮಾ ರಂಗದಲ್ಲಿ ಕೇವಲ ನನ್ನ ಪ್ರತಿಭೆಯಿಂದ ಮೇಲೆ ಬಂದಿಲ್ಲ, ಬದಲಾಗಿ ನನ್ನ ಬದ್ಧತೆ ಮತ್ತು ವೃತ್ತಿಪರತೆ ಕಾರಣ ನಾನು ಇಂದು ಈ ಹಂತವನ್ನು ತಲುಪಿದ್ದೇನೆ. ನಾನು ಧುರಂಧರ್​ ಸಿನಿಮಾದಲ್ಲಿ ಕಾಣಿಸಿಕೊಳ್ಳದಿರುವುದು ನನಗೆ ಆರ್ಥಿಕವಾಗಿ ಅಥವಾ ಖ್ಯಾತಿಯ ಮಟ್ಟದಲ್ಲಿ ನಷ್ಟವಾಗಿರಬಹುದು. ಆದರೆ, ಇಲ್ಲಿ ನನ್ನ ಬದ್ಧತೆ ಗೆದ್ದಿದೆ ಎಂದರೆ ತಪ್ಪಾಗುವುದಿಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿದ್ದಾರೆ.
ಆದರೂ, ನಾನು ಆದಿತ್ಯನ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿಕೊಂಡಿದ್ದರೆ, ನಾನು ಕೆಲಸ ಮಾಡುತ್ತಿದ್ದ ಸಿನಿಮಾಗೆ ತೊಂದರೆಯಾಗುತ್ತಿತ್ತು ಹಾಗೂ ಎರಡು ಕಡೆ ಒಟ್ಟಿಗೆ, ಒಂದೇ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ನನ್ನ ವೃತ್ತಿಪರತೆಗೆ ಪೆಟ್ಟು ನೀಡುತ್ತಿತ್ತು ಎಂದು ಅನಿಲ್​ ಕಪೂರ್​ ವಿವರಿಸಿದ್ದಾರೆ.

ಧುರಂಧರ್​ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ಥ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು. ಈಗ ಈ ಸಿನಿಮಾದ ಎರಡನೆ ಭಾಗ ಮಾರ್ಚ್​ 19 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ,ಆರ್.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net