ಗುಸುಗುಸು ಸುದ್ದಿಗೆ ಬಿತ್ತು ಬ್ರೇಕ್: ಡೇಟಿಂಗ್ ವದಂತಿ ಬೆನ್ನಲ್ಲೇ ವಾಕರ್ ಗುಣಗಾನ ಮಾಡಿದ ಅನನ್ಯಾ! Ananya Panday

ಬಾಲಿವುಡ್​ ನಟಿ Ananya Panday  (ಚಿತ್ರ Instagram)
ಬಾಲಿವುಡ್​ ನಟಿ Ananya Panday (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ ನಟಿ ಅನನ್ಯಾ ಪಾಂಡೆ ಕೆಲ ದಿನಗಳಿಂದ ವಾಕರ್ ಬ್ಲಾಂಕೊ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ
  • ಆದರೆ ಈ ವಿಷಯವಾಗಿ ಅವರಿಬ್ಬರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ
  • ಅನನ್ಯಾ ಪಾಂಡೆ ವಾಕರ್​ ಫೋಟೋವೊಂದನ್ನು ಹಂಚಿಕೊಂಡು ಜನ್ಮದಿನದ ಶುಭಾಶಯಗಳು ವಾಕಿ ಎಂದಿದ್ದಾರೆ
Ananya Panday: ಬಾಲಿವುಡ್​ ನಟಿ ಅನನ್ಯಾ ಪಾಂಡೆ ಕೆಲ ದಿನಗಳಿಂದ ವಾಕರ್ ಬ್ಲಾಂಕೊ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿದ್ದವು. ಆದರೆ ಈ ವಿಷಯವಾಗಿ ಅವರಿಬ್ಬರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.
ಸದ್ಯ ನಟಿ ವಾಕರ್‌ಗೆ ತಮ್ಮ ಇನ್ಸ್​ಸ್ಟಾಗ್ರಾಮ್​ ಖಾತೆಯ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ವಿಶೇಷವಾಗಿ ತಿಳಿಸಿದ್ದು, ಈ ಬೆಳವಣಿಗೆ ಅವರ ಸಂಬಂಧದ ಕುರಿತಾಗಿ ಅಭಿಮಾನಿಗಳಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.

ಸ್ಟೋರಿಯಲ್ಲಿ ಏನಿದೆ?

ಅನನ್ಯಾ ಪಾಂಡೆ ವಾಕರ್​ ಫೋಟೋವೊಂದನ್ನು ಹಂಚಿಕೊಂಡು ಜನ್ಮದಿನದ ಶುಭಾಶಯಗಳು ವಾಕಿ... ನೀನು ಅತ್ಯುತ್ತಮ ಎಂದು ಬರೆದಿದ್ದಾರೆ. ಮತ್ತೊಂದು ಕ್ಲಿಪ್​ನಲ್ಲಿ ನಿಜವಾದ ಹೂವುಗಳಿಂದ ಅಲಂಕರಿಸಲ್ಪಟ್ಟ ಸುಂದರವಾದ ಚಾಕೊಲೇಟ್​ ಕೇಕ್​ನ್ನು ಹಂಚಿಕೊಂಡು ಇದು ಈವರೆಗಿನ ಅತ್ಯಂತ ಪರಿಪೂರ್ಣ ಕೇಕ್ ಆಗಿರಬಹುದು ಎಂದು ಬರೆದಿದ್ದಾರೆ.

ಅನನ್ಯಾ ಪಾಂಡೆ ಮತ್ತು ವಾಕರ್ ಬ್ಲಾಂಕೊ ಬಗ್ಗೆ

2024 ರಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅನನ್ಯಾ ಮತ್ತು ವಾಕರ್​ ಒಟ್ಟಿಗೆ ಪ್ರತ್ಯೇಕ ಸಮಯ ಕಳೆಯುತ್ತಿರುವುದು ಕಂಡುಬಂದಿತ್ತು. ಈ ಸಮಯದಲ್ಲಿ ಅನನ್ಯಾ ಮತ್ತು ವಾಕರ್​ ಅವರನ್ನು ತನ್ನ ಸಂಗಾತಿ ಎಂದು ಕುಟುಂಬಸ್ಥರಿಗೆ ಮತ್ತು ಆಪ್ತರೊಂದಿಗೆ ಪರಿಚಯಿಸಿದ್ದರು ಎಂಬ ಸುದ್ಧಿ ಹರಿದಾಡಿತ್ತು. ಅಷ್ಟೇ ಅಲ್ಲದೆ, ಇಬ್ಬರೂ ಒಟ್ಟಿಗೆ ನೃತ್ಯ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇತ್ತೀಚಿಗೆ ಅನನ್ಯಾ ಪಾಂಡೆ ಅವರ ಹುಟ್ಟುಹಬ್ಬದಂದು ವಾಕರ್ ಬ್ಲಾಂಕೊ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನನ್ಯಾ ಅವರ ಸುಂದರ ಫೋಟೋವನ್ನು ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ಸುಂದರಿ! ನೀನು ತುಂಬಾ ವಿಶೇಷ.. ಸದಾ ನಿನ್ನನ್ನು ನಾನು ಪ್ರೀತಿಸುತ್ತೇನೆ ಎಂದು ಬರೆದಿದ್ದರು.

ವಾಕರ್ ಬ್ಲಾಂಕೊ ಯಾರು?

ವಾಕರ್ ಬ್ಲಾಂಕೊ ಅವರು ಮೂಲತಃ ಅಮೆರಿಕದವರು. ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ಪ್ರಸ್ತುತ ಜಾಮನಗರದಲ್ಲಿರುವ ರಿಲಯನ್ಸ್‌ನ 'ವಂತಾರಾ' (Vantara) ಪ್ರಾಣಿ ಸಂರಕ್ಷಣಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net