"ಅವರು ಕೇವಲ ವ್ಯಕ್ತಿಯಲ್ಲ, ಒಂದು ಭಾವನೆ": ಕೆಬಿಸಿ ವೇದಿಕೆಯಲ್ಲಿ ಧರ್ಮೇಂದ್ರ ನೆನೆದು ಭಾವುಕರಾದ ಅಮಿತಾಭ್​! Amitabh Bachchan

ಚಿತ್ರ Instagram
ಚಿತ್ರ Instagram
Published on
Amitabh Bachchan: ಬಾಲಿವುಡ್‌ ನಟ ಧರ್ಮೇಂದ್ರ ಅವರ ನಿಧನದ ನಂತರ ಕೌನ್​ ಬನೇಗಾ ಕರೋಡ್​ಪತಿ (Kaun Banega Crorepati) ಕಾರ್ಯಕ್ರಮದಲ್ಲಿ ಅಮಿತಾಭ್​ ಬಚ್ಚನ್​ ತಮ್ಮ ಸ್ನೇಹಿತನಿಗೆ ಗೌರವ ಸಲ್ಲಿಸುವುದರ ಜೊತೆಗೆ ಕೆಲವು ಸಮಯಗಳ ಕಾಲ ಭಾವುಕರಾದರು. ಈ ವೇಳೆ ಅಮಿತಾಭ್​ ನಡುಗುವ ಧ್ವನಿಯಲ್ಲಿ ನನ್ನ ಸ್ನೇಹಿತ ನನ್ನ ಕುಟುಂಬದ ಸದಸ್ಯ ಹಾಗೂ ಜೀವಮಾನದ ಸ್ಪೂರ್ತಿ ಎಂದು ಹೇಳಿದರು.

ಕೆಬಿಸಿಯಲ್ಲಿ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸಿದ ಅಮಿತಾಬ್

ಧರ್ಮೇಂದ್ರ ಅವರ ಕೊನೆಯ ಸಿನಿಮಾದ ಬಗ್ಗೆ ಮಾತನಾಡಿದ ಅಮಿತಾಭ್​, ಇಕ್ಕಿಸ್ ಚಿತ್ರವು ಲಕ್ಷಾಂತರ ಜನರಿಗೆ ಅಮೂಲ್ಯವಾದ ಸ್ಮರಣಿಕೆಯಾಗಿದ್ದು, ಜೀವನದ ಕೊನೆಯ ಉಸಿರು ಇರುವವರೆಗೂ ಕಲೆಯನ್ನು ಅಭ್ಯಾಸ ಮಾಡುವುದನ್ನು ತಿಳಿಸಿಕೊಡುತ್ತದೆ. ಅಂದಹಾಗೇ, ನನ್ನ ಸ್ನೇಹಿತ, ನನ್ನ ಆರಾಧ್ಯ ದೈವ ಧಮೇಂದ್ರ ಕೂಡ ಇದನ್ನೇ ಮಾಡಿದ್ದು ಎಂದು ಹೇಳಿದರು.
ಧಮೇಂದ್ರ ಅವರು ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ. ಬದಲಾಗಿ ಒಂದು ಭಾವನೆಯಾಗಿದ್ದರು. ಆ ಭಾವನೆ ನಮ್ಮಿಂದ ಹೊರ ಹೋಗಲು ನಾನು ಎಂದಿಗೂ ಬಿಡುವುದಿಲ್ಲ. ಅವರು ನೆನಪಾದಗಲೆಲ್ಲಾ, ನಮ್ಮನ್ನು ಮುಂದೆ ಸಾಗಿಸುವ ಆಶೀರ್ವಾದ ಎಂದು ತಿಳಿಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಮಿತಾಬ್​ ಶೋಲೆಯ ಚಿತ್ರೀಕರಣ ಸಂದರ್ಭದಲ್ಲಿ ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡರು. ಅವರು, ನಾವು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಅವರಲ್ಲಿ ನಾನು ಕರೆಯುವ ದೈಹಿಕ ಗುಣವಿತ್ತು. ಅವರು ಕುಸ್ತಿಪಟು, ನಾಯಕರಾಗಿದ್ದರು. ಈ ಸಿನಿಮಾದ ಸಾವಿನ ದೃಶ್ಯದಲ್ಲಿ ಅವರನ್ನು ಪರದೆಯ ಮೇಲೆ ನೋಡಿ ತುಂಬಾ ಸಂಕಟವಾಗಿತ್ತಿತ್ತು. ಏಕೆಂದರೆ, ಅವರು ನನ್ನನ್ನು ಬಹಳ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇದು ಸಹಜ ನಟನೆಯಾಗಿತ್ತು. ಇದು ಧರ್ಮೇಂದ್ರ ಅವರನ್ನು ಕೇವಲ ಸಿನಿಮೀಯ ವಿಚಾರದಲ್ಲಿ ಗಮನಿಸದೇ, ತನ್ನ ಸುತ್ತಲಿನ ಎಲ್ಲರಿಗೂ ಸ್ಪೂರ್ತಿ ನೀಡಿದ ಸಹಜ ಕಲಾವಿದನಾಗಿ ಎತ್ತಿ ತೋರಿಸಿದೆ ಎಂದು ಅಭಿಪ್ರಾಯ ಸೂಚಿಸಿದರು.
ನನ್ನ ಕೊನೆಯ ಚಿತ್ರದಲ್ಲಿ ಅವರು ಕೆಲಸ ಮಾಡಿದ್ದಕ್ಕೆ ನನಗೆ ತುಂಬಾ ಸಂತೋಷ ತಂದು ಕೊಟ್ಟಿದೆ ಎಂದು ಕೆಬಿಸಿಯಲ್ಲಿ ಇಕ್ಕಿಸ್ ನಿರ್ದೇಶನದ ನಿರ್ದೇಶಕ ಶ್ರೀರಾಮ್ ರಾಘವನ್ ಹೇಳಿದರು. ಆದಾಗ್ಯೂ, ಚಿತ್ರದ ಭಾಗವಾಗಿರುವ ನಟ ಜೈದೀಪ್ ಅಹ್ಲಾವತ್ ಚಿತ್ರೀಕರಣದ ಸಮಯದಲ್ಲಿ ಹೆಚ್ಚಿನ ದೃಶ್ಯಗಳನ್ನು ಅವರೊಂದಿಗೆ ಮಾಡಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನಾನು ಸೆಟ್​​ನಲ್ಲಿ ಸೂಪರ್​ ಸ್ಟಾರ್​ನೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸಲಿಲ್ಲ. ಬದಲಿಗೆ ಕುಟುಂಬದಂತೆ ಭಾವಿಸಿದೆ ಎಂದರು.

ಇಕ್ಕಿಸ್ ಚಿತ್ರದ ಬಗ್ಗೆ

ಶ್ರೀರಾಮ್ ರಾಘವನ್ ನಿರ್ದೇಶನದ ಇಕ್ಕೀಸ್ ಒಂದು ಬಯೋಗ್ರಫಿಕಲ್ ವಾರ್ ಡ್ರಾಮಾ ಚಿತ್ರವಾಗಿದ್ದು ವಿಶ್ವದಾದ್ಯಂತ ಜನವರಿ 1 ರಂದು ಬಿಡುಗಡೆಯಾಗಿದೆ. ಈ ಚಿತ್ರವನ್ನು ಸಂಪೂರ್ಣವಾಗಿ ಹೃದಯದಿಂದ ನಿರ್ಮಿಸಲಾದ ಚಿತ್ರ" ಎಂದು ಅನೇಕರು ಬಣ್ಣಿಸಿದ್ದಾರೆ. ಅಗಸ್ತ್ಯ ನಂದಾ ಮುಖ್ಯ ಭೂಮಿಕೆಯಲ್ಲಿ, ಧರ್ಮೇಂದ್ರ ತಂದೆಯಾಗಿ ಕೊನೆಯ ಚಿತ್ರ ಇದಾಗಿದ್ದು, ಜೈದೀಪ್ ಅಹ್ಲಾವತ್, ಸಿಮರ್ ಭಾಟಿಯಾ ಸಹ ನಟಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net