Amitabh Bachchan - ಹೂಡಿಕೆ ₹7 ಕೋಟಿ, ಗಳಿಕೆ ₹210 ಕೋಟಿ!

ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್
Published on
ಅತ್ಯಂತ ಲಾಭದಾಯದ ಕ್ಷೇತ್ರಗಳಲ್ಲಿ ರಿಯಲ್​ ಎಸ್ಟೇಟ್​ ಕೂಡ ಒಂದು. ಹೀಗಾಗಿಯೇ ಸಿನಿಮಾ ತಾರೆಯರು ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದು ಸಾಮಾನ್ಯ. ಹಣವಿದ್ದಾಗ ಎಲ್ಲಾದರೂ ಒಂದು ಪ್ರಾಪರ್ಟಿ ಖರೀದಿಸುವ ಅವರು, ಹಣದ ಅವಶ್ಯಕತೆ ಬಂದಾಗ ಅದನ್ನು ಮಾರುತ್ತಾರೆ. ಅಥವಾ ಅಲ್ಲಿ ಮನೆ, ಕಚೇರಿ, ಫಾಮ್​ರ್ಹೌಸ್​, ಅಥವಾ ವಾಣಿಜ್ಯ ಕಟ್ಟಡ ನಿರ್ಮಿಸುವುದುಂಟು. ಅದಕ್ಕೆ ಉತ್ತಮ ಉದಾಹರಣೆ ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​.
ಹೌದು, 2007ರಲ್ಲಿ ಗುಜರಾತನ್​ ರಾಯಭಾರಿಯಾಗಿದ್ದ ಸಮಯದಲ್ಲಿ ಅಮಿತಾಭ್​, ಅಹಮದಾಬಾದ್​ನ ಗಿಫ್ಟ್​ ಸಿಟಿ (ಗುಜರಾತ್​ ಇಂಟರ್​ನ್ಯಾಷನಲ್​ ಫೈನಾನ್ಸ್​ ಟೆಕ್​ ಸಿಟಿ) ಸಮೀಪ ₹7 ಕೋಟಿ ಕೊಟ್ಟು 5.72 ಎಕರೆ ಜಾಗ ಖರೀದಿಸಿದ್ದರು. ಕೆಲ ವರ್ಷಗಳ ಹಿಂದೆ ಆ ಭೂಮಿಯನ್ನು ಪುತ್ರ ಅಭಿಷೇಕ್​ ಹೆಸರಿಗೆ ವರ್ಗಾಯಿಸಿದ್ದರು. ಇದೀಗ ರಿಯಲ್​ ಎಸ್ಟೇಟ್​ ಉದ್ಯಮಿಯೂ ಆಗಿರುವ ನಿರ್ಮಾಪಕ ಆನಂದ್​ ಪಂಡಿತ್​ ಜತೆ ಸೇರಿ ಅಭಿಷೇಕ್​ ಆ ಜಾಗವನ್ನು ಡೆವೆಲಪ್​ ಮಾಡಲು ಮುಂದಾಗಿದ್ದಾರೆ.
ಸುಮಾರು 10 ಲಕ್ಷ ಚದರಡಿಯಲ್ಲಿ ಐಶಾರಾಮಿ ಅಪಾರ್ಟ್​ಮೆಂಟ್​, ಕಚೇರಿ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಪ್ಲ್ಯಾನ್​ನ್​ ಮಾಡಿದ್ದಾರೆ. ಅಂದಹಾಗೆ, ಈ ಜಾಗದ ಪ್ರಸ್ತುತ ಮೌಲ್ಯ ಬರೋಬ್ಬರಿ ₹210 ಕೋಟಿ ದಾಟಿದೆ ಎನ್ನಲಾಗಿದೆ. ಆ ಮೂಲಕ ₹7 ಕೋಟಿ ಹೂಡಿಕೆ 19 ವರ್ಷಗಳಲ್ಲಿ ₹203 ಕೋಟಿ ಲಾಭ ನೀಡಿದಂತಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net