ಟೀಸರ್ ಸುಮಾರು 1 ನಿಮಿಷ 55 ಸೆಕೆಂಡ್ ಉದ್ದವಿದ್ದು, ಇದರಲ್ಲಿ ಆಲಿಯಾ ಭಟ್, ಸಖತ್ ಆ್ಯಕ್ಷನ್ಗಳಲ್ಲಿ ತೊಡಗಿರುವ ಸೀನ್ಗಳನ್ನು ನೋಡ ಬಹುದಾಗಿದೆ. ಕೆಲ ದಿನಗಳ ನಂತರ ಟ್ರೇಲರ್ ರೀಲಿಸ್ ಆಗಲಿದ್ದು, ಆಗ ಸಿನಿಮಾದ ಕಥೆ ಏನು? ವಿಲನ್ ಯಾರು? ಹಿಂದಿನ ಸ್ಪೈ ಸಿನಿಮಾಗಳ ಜೊತೆ ಏನಾದರೂ ನಂಟಿದೆಯೇ ಎಂದು ಆಗ ಒಂದು ಅಂದಾಜು ಮೂಡಲಿದೆ. ಸಿನಿಮಾ ಬಿಡುಗಡೆಗೆ ಸಂಪೂರ್ಣ ಸಿದ್ಧವಾಗಿದ್ದು ಇದೇ ಜುಲೈ 3 ರಂದು ತೆರೆಕಾಣಲಿದೆ ಎಂದು ಸಿನಿಮಾ ತಂಡ ಘೋಷಿಸಿದೆ.