ಮಗಳು ಸಿನಿಮಾ ರಂಗಕ್ಕೆ ಬರುವುದು ಆಲಿಯಾ ಭಟ್‌ಗೆ ಇಷ್ಟವಿಲ್ಲವೇ? ರಾಹಾ ಭವಿಷ್ಯದ ಬಗ್ಗೆ ನಟಿ ಬಿಚ್ಚಿಟ್ಟ ಅಚ್ಚರಿಯ ಸಂಗತಿ! Alia Bhatt

Alia Bhatt ಚಿತ್ರ Instagram
Alia Bhatt ಚಿತ್ರ Instagram
Published on
Alia Bhatt: ಬಾಲಿವುಡ್‌ನ ಜನಪ್ರಿಯ ನಟಿ ಆಲಿಯಾ ಭಟ್ ತಮ್ಮ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿದ್ದರೂ, ಪ್ರಸ್ತುತ ಅವರ ಪ್ರಪಂಚವೆಲ್ಲಾ ಮಗಳು ರಾಹಾ ಕಪೂರ್​ ಸುತ್ತಲೂ ಸುತ್ತುತ್ತಲೇ ಇರುತ್ತದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆಲಿಯಾ ತನ್ನ ಮಗಳ ಭವಿಷ್ಯದ ಬಗ್ಗೆ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದು, ಮುಂದೊಂದು ದಿನ ಅವಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವುದನ್ನು ನೋಡಲು ಇಷ್ಟ ಪಡುತ್ತೇನೆ ಎಂದು ಹೇಳಿದ್ದಾರೆ.

ರಾಹಾ ಅವರ ಕ್ರೀಡಾ ಸ್ವಭಾವದ ಬಗ್ಗೆ ಆಲಿಯಾ ಭಟ್!

ಫೆಮಿನಾ ಜೊತೆಗಿನ ಸಂಭಾಷಣೆಯಲ್ಲಿ, ಆಲಿಯಾ ತನ್ನ ಮಗಳಲ್ಲಿ ಈಗಾಗಲೇ ಬಲವಾದ ಅಥ್ಲೆಟಿಕ್​ ಸಾಮರ್ಥ್ಯ ಲಕ್ಷಣಗಳನ್ನು ನೋಡುತ್ತಿದ್ದು, ಅವಳು ನಿಜವಾಗಿಯೂ ಕ್ರೀಡಾಪಟುವಾಗಬೇಕೆಂದು ನಾನು ಬಯಸುತ್ತೇವೆ. ರಾಹಾಗೆ ಮೂರು ವರ್ಷ ಆದರೆ, ಅವಳು ಜೇನು ನೊಣದಂತೆ ಜಿಗಿಯುತ್ತಾಳೆ ಎಂದರು.
ಆದಾಗ್ಯೂ, ಆಲಿಯಾ ತನ್ನ ಜೀವನದ ಮೇಲೆ ಪ್ರಭಾವ ಬೀರಿದ ಮಹಿಳೆಯರ ಬಗ್ಗೆ ಮಾತನಾಡುತ್ತಾ, ನನ್ನ ಜೀವನದ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅದು ನನ್ನ ತಾಯಿ. ನಾನು ಮತ್ತು ನನ್ನ ಸಹೋದರಿ ಶಾಹೀನ್ ಬೆಳೆಯುತ್ತಿರುವಾಗ, ತಾಯಿ ನಮ್ಮನ್ನು ಸಲಹುವ ರೀತಿ ನಮಗೆ ದೊಡ್ಡ ಪಾಠವಾಗಿತ್ತು. ನಮ್ಮಿಬ್ಬರನ್ನು ಬೆಳೆಸುವ ಜವಾಬ್ದಾರಿಯ ನಡುವೆಯೂ ಅವರು ತಮ್ಮೊಳಗಿನ ನಟಿಯಾಗಬೇಕೆಂಬ ಹಂಬಲವನ್ನು ಎಂದಿಗೂ ಕೈಬಿಡಲಿಲ್ಲ," ಎಂದು ನೆನಪಿಸಿಕೊಂಡಿದ್ದಾರೆ.

ಆಲಿಯಾ ಅವರ ವೈಯಕ್ತಿಕ ಮತ್ತು ವೃತ್ತಿಪರ ಪಯಣ

ಆಲಿಯಾ ಮತ್ತು ರಣಬೀರ್ ಏಪ್ರಿಲ್ 14, 2022 ರಂದು ಮುಂಬೈನ ತಮ್ಮ ಮನೆಯಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಅದೇ ವರ್ಷ ನವೆಂಬರ್​ 6 ರಂದು ರಾಹಾಗೆ ಜನ್ಮ ನೀಡಿದರು.
ಕೆಲಸದ ವಿಷಯದಲ್ಲಿ, ಆಲಿಯಾ ತುಂಬಾ ಬ್ಯುಸಿಯಾಗಿದ್ದು, ಮುಂದಿನ ವರ್ಷ ಶಾರ್ವರಿ ಮತ್ತು ಬಾಬಿ ಡಿಯೋಲ್ ಜೊತೆಗೆ YRF ನ ಗೂಢಚಾರ ವಿಶ್ವ ಚಿತ್ರ ಆಲ್ಫಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಸಂಜಯ್​ ಲೀಲ್​ ಬನ್ಸಾಲಿ ಅವರ ಲವ್​ ಅಂಡ್​ ವಾರ್​ ಚಿತ್ರದಲ್ಲಿ ರಣಬೀರ್ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net