ವಯಸ್ಸಾಯ್ತು ಅಜಯ್! ಹುಟ್ಟುಹಬ್ಬದಂದೇ ಪತಿಗೆ ಸ್ವೀಟ್ ಆಗಿ ರೋಸ್ಟ್ ಮಾಡಿದ ಕಾಜೋಲ್...Kajol

Kajol (ಚಿತ್ರ Instagram)
Kajol (ಚಿತ್ರ Instagram)
Published on
Kajol: ಬಾಲಿವುಡ್‌ನ ‘ಸಿಂಗಮ್’ ಎಂದೇ ಖ್ಯಾತಿ ಪಡೆದಿರುವ ಅಜಯ್​ ದೇವಗನ್ ತಮ್ಮ 57 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ​ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿರುವ ನಡುವೆ, ಪತ್ನಿ ಕಾಜೋಲ್ ಹಾಕಿದ ತಮಾಷೆಯ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪೋಸ್ಟ್​ನಲ್ಲೇನಿದೆ?

ಕೆಲವು ಸಮಯದಲ್ಲಿ ಕೇಕ್ ಮೇಲಿನ ಮೇಣದಬತ್ತಿಗಳು ಕೇವಲ ಆಚರಣೆಯಂತೆ ಕಾಣುವುದಿಲ್ಲ, ಬದಲಾಗಿ ಅವು ಬೆಂಕಿಯ ಅಪಾಯದಂತೆ ಕಾಣುತ್ತವೆ... ನೀವು ಆ ಹಂತವನ್ನು ತಲುಪಿದ್ದೀರಿ ಎಂದು ನಾನು ಭಾವಿಸುತ್ತೇನೆ! ಹೇಗಾದರೂ ಹುಟ್ಟುಹಬ್ಬದ ಶುಭಾಶಯಗಳು... ನಿಮಗೆ ಯಾವಾಗಲೂ ಕೇಕ್ ಸಿಗುವಂತಾಗಲಿ ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಕಾಜೋಲ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಅಭಿಮಾನಿಗಳು ಇದು ನಿಜವಾದ ದಂಪತಿಯ ಕೆಮಿಸ್ಟರಿ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನೂ ಕೆಲವರು ಸದಾ ತೆರೆಯ ಮೇಲೆ ಅಬ್ಬರಿಸುವ ಅಜಯ್, ಮನೆಯಲ್ಲಿ ಇಷ್ಟು ಸಾಫ್ಟ್ ಆಗಿ ಇರುತ್ತಾರಾ? ಎಂದು ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಜಯ್​ ಕಾಜೋಲ್​ ದಾಂಪತ್ಯ ಜೀವನ

1955 ರಲ್ಲಿ ಅಜಯ್​ ಮತ್ತು ಕಾಜೋಲ್​ ಮೊದಲ ಬಾರಿಗೆ ಭೇಟಿಯಾದರು. ಸ್ಣೇಹವಾಗಿ ಪ್ರಾರಂಭವಾದ ಪಯಣ ಪ್ರೀತಿಯಾಗಿ ಚಿಗುರೊಡೆಯಿತು. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಜೋಡಿ 1999 ರಲ್ಲಿ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು. ಅವರಿಗೆ ಮಗಳು ನೈಸಾ ದೇವಗನ್ ಮತ್ತು ಮಗ ಯುಗ್ ದೇವಗನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಅಜಯ್ ದೇವಗನ್ ಗೆ ಶುಭ ಹಾರೈಸಿದ ಸೆಲೆಬ್ರಿಟಿಗಳು

ಅಜಯ್ ಅವರ ಹುಟ್ಟುಹಬ್ಬಕ್ಕೆ ಉದ್ಯಮದ ಸ್ನೇಹಿತರಿಂದ ಶುಭಾಶಯದ ಮಹಾಪೂರವೇ ಹರಿದುಬಂದಿದೆ. ಆದಾಗ್ಯೂ, ಅಕ್ಷಯ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದು ಸಿಂಗಮ್ ಎಗೇನ್' ಚಿತ್ರೀಕರಣದ ಸಮಯದ ಒಂದು ಮೋಜಿನ ವಿಡಿಯೋ ಆಗುದೆ. ಇದರಲ್ಲಿ ಅಕ್ಷಯ್ ಕುಮಾರ್ ಅವರು ಅಜಯ್ ದೇವಗನ್ ಅವರ ಕೆನ್ನೆಗೆ ಮುತ್ತಿಡುತ್ತಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net