ಮೆಲೋಡಿ ಕ್ವೀನ್ ಎಂತಲೇ ಖ್ಯಾತಿ ಪಡೆದಿರುವ ಶ್ರೇಯಾ ಘೋಷಾಲ್ ಅವರು ಇಲ್ಲಿಯವರೆಗೂ ಕನ್ನಡ, ಹಿಂದಿ, ಬಂಗಾಳಿ ಸೇರಿದಂತೆ ಹಲವು ಭಾರತೀಯ ಭಾಷೆಯಲ್ಲಿ ಹಾಡನ್ನು ಹಾಡಿದ್ದಾರೆ. ಎಬಿಪಿ ನ್ಯೂಸ್ನ ಸಂದರ್ಶನದಲ್ಲಿ ಮಾತನಾಡುತ್ತ ಅವರು ಹೇಳಿದ್ದು ಹೀಗೆ.. `ಲೈವ್ ಕಾರ್ಯಕ್ರಮಗಳಲ್ಲಿ ಲಿಪ್ ಸಿಂಕ್ ಮಾಡುವಂತಹ ಪ್ರಸಂಗಗಳು ನನಗೆ ಅತ್ಯಂತ ಮುಜುಗರವಾಗುವಂತದ್ದು. ಅಂತಹ ಪರಿಸ್ಥಿತಿ ನನಗೆ ಎದುರಾದರೆ ಅಂದೇ ನಾನು ನನ್ನ ವೃತ್ತಿ ಜೀವನಕ್ಕೆ ವಿರಾಮ ಹಾಕಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.