ಹರ್ಮೆಶ್ ಮಲ್ಹೋತ್ರಾ ನಿರ್ದೇಶನದ ಹಾಗೂ ರಾಜಾ ರಾಯ್ ನಿರ್ಮಾಣದ ಈ ಚಿತ್ರದಲ್ಲಿ ರಜಿನಿಕಾಂತ್, ಹೇಮಾ ಮಾಲಿನಿ, ಶತ್ರುಘ್ನ ಸಿನ್ಹಾ, ಅನಿತಾ ರಾಜ್, ಪ್ರೇಮ್ ಚೋಪ್ರಾ, ಶರತ್ ಸ್ಯಾಕ್ಸೆನಾ, ಶಾರದ್ ಸ್ಯಾಕ್ಸೆನಾ, ಅಮ್ರಿಶ್ ಪೂರಿ ಮತ್ತು ಜಗದೀಪ್ ಸೇರಿ ಬಹುದೊಡ್ಡ ತಾರಾಗಣವೇ ಇತ್ತು. ಡೈಲಾಗ್ ಮತ್ತು ಸಂಗೀತದಿಂದಲೇ ನೋಡುಗರಿಂದ ಮೆಚ್ಚುಗೆ ಪಡೆದಿದ್ದ ಚಿತ್ರವು, ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಂಡು, 4K ರೀಮಾಸ್ಟರಿಂಗ್ ಮತ್ತು 5.1 ಸರೌಂಡ್ ಸೌಂಡ್ ಮಾಸ್ಟರಿಂಗ್‌ಗೆ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಕಾಲಿಡಲಿದೆ ಎಂದು ಚಿತ್ರತಂಡ ತಿಳಿಸಿದೆ,(ಏಜೆನ್ಸೀಸ್).