ಆತನೇ ಕಳಿಸಿರೋ​... ಚಾಹಲ್​ ಮಾಡಿದ ಮೆಸೇಜ್​ಗಳನ್ನು ನೀವೇ ನಿಮ್ಮ ಕಣ್ಣಾರೆ ನೋಡಿ! ಹಾಟ್​ ಬ್ಯೂಟಿ ಆರೋಪ

ನಟಿ ತಾನಿಯಾ ಚಟರ್ಜಿ ಆರೋಪ
ನಟಿ ತಾನಿಯಾ ಚಟರ್ಜಿ ಆರೋಪ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ರಸ್ತೆಯಲ್ಲಿ ಸಿಗರೇಟ್​ ಸೇದುತ್ತಿದ್ದ ಯಜುವೇಂದ್ರ ಚಾಹಲ್​
  • ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಡೆದುಕೊಂಡಿದ್ದಕ್ಕೆ ಹಲವರು ಗರಂ
  • ಈಗ ನಟಿ ತಾನಿಯಾ ಚಟರ್ಜಿಯಿಂದ ಮೆಸೇಜ್ ಆರೋಪ
Yuzvendra Chahal: ಮೊನ್ನೆ ಮೊನ್ನೆಯಷ್ಟೇ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್​ ಸೇದುತ್ತ ನಿಂತಿದ್ದ ಟೀಮ್ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಾಹಲ್​, ಜನರ ಕೆಂಗಣ್ಣಿಗೆ ಗುರಿಯಾದರು. ಕ್ರಿಕೆಟ್​ಗಿಂತಲೂ ತಮ್ಮ ವೈಯಕ್ತಿಕ ವಿಚಾರಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುವ ಚಾಹಲ್​, ಇದೀಗ ನಟಿಯ ಆರೋಪಕ್ಕೆ ಸಿಲುಕಿದ್ದಾರೆ.
ಪ್ರಸ್ತುತ, ಪಂಜಾಬ್​ ಕಿಂಗ್ಸ್​ಗೆ ಆಡುತ್ತಿರುವ ಚಾಹಲ್​, ಐಪಿಎಲ್​ 19ನೇ ಆವೃತ್ತಿಯಲ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಸ್ತೆಯಲ್ಲಿ ಧಮ್​ ಹೊಡೆಯುವಾಗ ಸಿಕ್ಕಿಬಿದ್ದು, ಹಲವರ ಟೀಕೆಗೆ ಗುರಿಯಾಗಿದ್ದ ಯಜುವೇಂದ್ರ, ಇದೀಗ ನಟಿಯೊಬ್ಬರಿಗೆ ಮಾಡಿದ ಮೆಸೇಜ್​ಗಳು ಬಯಲಿಗೆ ಬಂದಿವೆ. ಬಾಲಿವುಡ್​ ನಟಿ, ಮಾಡೆಲ್​ ಆಗಿರುವ ತಾನಿಯಾ ಚಟರ್ಜಿ ತನಗೆ ಚಾಹಲ್​ ಈ ರೀತಿಯೆಲ್ಲ ಸಂದೇಶ ಕಳುಹಿಸಿದ್ದಾನೆ ನೋಡಿ ಎಂದು ಆರೋಪಿಸಿದ್ದಾರೆ.   

ಮೊಬೈಲ್​ ಅನ್ನೇ ತೋರಿಸಿದ ನಟಿ

ಫೋಟೋಗ್ರಾಫರ್​ಗಳು ಮತ್ತು ಕೆಲವು ಮೀಡಿಯಾಗಳಿಗೆ ತನ್ನ ಇನ್​ಸ್ಟಾಗ್ರಾಮ್​ ಖಾತೆಯನ್ನು ಓಪನ್ ಮಾಡಿ ತೋರಿಸಿದ ತಾನಿಯಾ, ನೀವೇ ನೋಡಿ, ನನಗೆ ಚಾಹಲ್​ ಖುದ್ದಾಗಿ ಮಾಡಿರುವ ಮೆಸೇಜ್​ಗಳಿವು. 'ನೀವು ಕ್ಯೂಟ್​ ಆಗಿದ್ದೀರಾ' ಎಂಬ ಸಂದೇಶಗಳನ್ನು ಕಳಿಸಿದ್ದಾರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ, ನಟಿಯ ಆರೋಪಗಳು ನಿಜವೇ? ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಚಾಹಲ್​ ಏನು ಹೇಳುತ್ತಾರೆ? ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net