ಕರಾಳ 14 ದಿನಗಳು!: ಫುಡ್ ಪಾಯಿಸನ್‌ನಿಂದ ನರಳಿ ಆಸ್ಪತ್ರೆ ಸೇರಿದ್ದ ನಟಿ ಸಬಾ ಆಜಾದ್

ಸಬಾ ಆಜಾದ್​
ಸಬಾ ಆಜಾದ್​
Published on

ಪ್ರಮುಖ ಮುಖ್ಯಾಂಶಗಳು

  • ‘ಸೈಕ್ಲೋಸ್ಪೋರಾ ಕ್ಯಾಯೆಟ್‌ನೆನ್ಸಿಸ್’ ಎಂಬ ಹೊಟ್ಟೆ ನೋವಿನಿಂದ ಬಳಲಿದ ಸಬಾ
  • 14 ದಿನದಲ್ಲಿ 4 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್ ನಟಿ
  • ಮನೆಯಲ್ಲಿ ತರಕಾರಿ ತೊಳೆದು ಬಳಸಿ ಎಂದು ಸಲಹೆ ನೀಡಿದ ಸಬಾ
ಹಿಂದಿಯ ‘ದಿಲ್ ಕಬಡ್ಡಿ’, ‘ಮುಜೇ ಫ್ರೆಂಡ್‌ಶಿಪ್ ಕರೋಗೆ’, ‘ಬಂದರ್’ ಖ್ಯಾತಿಯ ನಟಿ ಸಬಾ ಆಜಾದ್, ನಟ ಹೃತಿಕ್ ರೋಷನ್ ಜತೆ ಸಂಬಂಧದಲ್ಲಿದ್ದಾರೆ ಎಂಬ ಕಾರಣಕ್ಕೆ ಇಷ್ಟು ದಿನ ಹೆಚ್ಚು ಸುದ್ದಿಯಾಗುತ್ತಿದ್ದರು. ಅಂತಹ ಸಬಾ ಇದೀಗ ಡಿಢೀರನೆ ಆಸ್ಪತ್ರೆಗೆ ದಾಖಲಾಗಿ, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದಾರೆ. ಇತ್ತೀಚೆಗೆ ಸಬಾ ತೀವ್ರ ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷೆ ಮಾಡಿದ್ದು, ಬಳಿಕ ಇದು ಫುಡ್ ಪಾಯಿಸನ್‌ನಿಂದ ಈ ನೋವು ಕಾಣಿಸಿಕೊಂಡಿರುವುದಾಗಿ ಹೇಳಿದ್ದಾರೆ. ‘ಸೈಕ್ಲೋಸ್ಪೋರಾ ಕ್ಯಾಯೆಟ್‌ನೆನ್ಸಿಸ್’ ಎಂಬ ಹೊಟ್ಟೆ ನೋವಿನ ಕಾಯಿಲೆಯಿಂದ ಬಳಲಿ ಸಬಾ 14 ದಿನಗಳ ಕಾಲ ನರಕಯಾತನೆ ಅನುಭವಿಸಿದ್ದಾರೆ. ಇದರಿಂದಾಗಿ 4 ಕೆಜಿ ತೂಕ ಕಡಿಮೆಯಾಗಿದೆಯಂತೆ. ಈ ಆರೋಗ್ಯ ಯಾತನೆ ಬಗ್ಗೆ ಸಬಾ ಆಜಾದ್ ‘ಮನೆಯ ಊಟವನ್ನೇ ತಿಂದು, ಮನೆಯಿಂದಲೇ ಕುಡಿಯಲು ನೀರು ತೆಗೆದುಕೊಂಡು ಹೋಗುವ ನನ್ನಂಥವಳಿಗೆ ‘ಸೈಕ್ಲೋಸ್ಪೋರಾ ಕ್ಯಾಯೆಟ್‌ನೆನ್ಸಿಸ್’ ಎಂಬ ಕಾಯಿಲೆ ತೀವ್ರ ಯಾತನೆ ನೀಡಿತು. ಆಸ್ಪತ್ರೆಯ 14 ದಿನಗಳು ಕರಾಳ ಅನುಭವ ನೀಡಿದವು. ತುಂಬಾ ಬಿಜಿ ಇರುವಾಗಲೇ ಈ ಕಾಯಿಲೆಯಿಂದಾಗಿ ಅಪಾರ ನೋವು ಅನುಭವಿಸಬೇಕಾಯಿತು. ಅಷ್ಟೇ ಅಲ್ಲದೇ ಎರಡು ವಾರದಲ್ಲಿ 4 ಕೆಜಿ ತೂಕ ಕಳೆದುಕೊಳ್ಳಬೇಕಾಯಿತು. ಹೀಗಾಗಿ, ನಾನು ನಿಶ್ಯಕ್ತಿಯಿಂದ ಬಳಲುತ್ತಿದ್ದೇನೆ. ದಯವಿಟ್ಟು ಮನೆಯಲ್ಲಿ ತರಕಾರಿಗಳನ್ನು ಚೆನ್ನಾಗಿ ತೊಳೆದು ಬಳಸಿರಿ’ ಎಂದು ನಟಿ ಸಲಹೆ ನೀಡಿದ್ದಾರೆ. ಈ ಯಾತನೆಯಲ್ಲಿ ಹೃತಿಕ್ ರೋಷನ್ ಬೆಂಬಲವಾಗಿ ನಿಂತಿದ್ದಕ್ಕೆ ನಟನನ್ನು ಸಭಾ ಸ್ಮರಿಸಿದ್ದಾರೆ. ಸದ್ಯ ನಟಿ ಚೇತರಿಸಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net