ವದಂತಿಗಳು ಹರಿದಾಡುತ್ತಿದ್ದರು ಅದನ್ನು ಕೇಳಿಕೊಂಡು ನಾನು ಮೌನವಾಗಿರುವುದು ಎಲ್ಲವನ್ನು ಮರೆಮಾಡುವುದಕ್ಕಲ್ಲ. ಬದಲಾಗಿ, ನನ್ನ ವೈಯಕ್ತಿಕ ಜೀವನದಲ್ಲಿ ಬೇರೆಯವರು ಮೂಗು ತೂರಿಸುವುದು ಇಷ್ಟವಿಲ್ಲ ಎಂದು ಹೇಳಲು. ನಾನು ಅದನ್ನು ನಂಬಿದ್ದೀನಿ ಕೂಡ. ಸಾಕಷ್ಟು ಆಡಿಷನ್‌ಗಳು, ಕೆಲವರಿಂದ ತಿರಸ್ಕಾರಗಳು, ನಿದ್ರೆ ಇಲ್ಲದ ಅನೇಕ ರಾತ್ರಿಗಳು ಮತ್ತು ನಿರಂತರ ಆತ್ಮವಿಶ್ವಾಸದ ಮೂಲಕ ನಾನು ಇಂದು ಈ ಹಂತವನ್ನು ತಲುಪಿದ್ದೇನೆ. ಆದರೆ, ನನ್ನ ಈ ಸಿನಿ ಪ್ರಯಾಣವನ್ನು ಕೇವಲ ಒಂದು ವದಂತಿಯಲ್ಲಿ ಅಣಕಿಸುವುದು ತುಂಬಾ ಅನ್ಯಾಯ. ಸಾಮಾಜಿಕ ಜಾಲತಾಣ ಎಲ್ಲರಿಗೂ ಒಂದು ಧ್ವನಿ ನೀಡುತ್ತದೆ ನಿಜ. ಆದರೆ, ಅದು ಜವಾಬ್ದಾರಿಯನ್ನು ಸಹ ಬಯಸುತ್ತದೆ. ಕೆಲವು ವೀವ್ಸ್, ಲೈಕ್ಸ್ ಮತ್ತು ಶೇರ್ಗಳಿಗಾಗಿ ನೀವು ಹರಡುವ ವಂದತಿ ಮನಸ್ಸಿಗೆ ತುಂಬಾ ಘಾಸಿ ಉಂಟುಮಾಡುತ್ತಿವೆ. ಆದರೆ, ಆ ವದಂತಿಗಳು ಕೆಲವೊಂದು ಜನರ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಮರೆಯಬೇಡಿ. ನಾನಿಲ್ಲಿ ನಿಮಗೆ ಸ್ಪಷ್ಟವಾಗಿ ತಿಳಿಸುವುದೇನೆಂದರೆ, ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎನ್ನುವ ಮೂಲಕ ಎಲ್ಲ ವದಂತಿಗಳಿಗೆ ಮೃನಾಲ್ ತೆರೆ ಎಳೆದಿದ್ದಾರೆ.