Shakthi Mohan - ಹುಡುಗರನ್ನು ನಂಬದ ಶಕ್ತಿ ಮೋಹನ್​! ಕಾರಣವೇನು ಗೊತ್ತಾ?

ಶಕ್ತಿ ಮೋಹನ್
ಶಕ್ತಿ ಮೋಹನ್
Published on
"ಡಾನ್ಸ್​ ಇಂಡಿಯಾ ಡಾನ್ಸ್​ 2' ರಿಯಾಲಿಟಿ ಶೋ ಗೆಲ್ಲುವ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಪ್ರತಿಭೆ ಶಕ್ತಿ ಮೋಹನ್​. ಬಳಿಕ ಹಲವು ರಿಯಾಲಿಟಿ ಶೋಗಳು, ಮ್ಯೂಸಿಕ್​ ವಿಡಿಯೋ ಆಲ್ಬಂ ಹಾಡುಗಳು ಸೇರಿ "ಎಬಿಸಿಡಿ' ಸರಣಿ ಜತೆಗೆ ಕೆಲ ಬಾಲಿವುಡ್​ ಚಿತ್ರಗಳಲ್ಲೂ ಶಕ್ತಿ ಕಾಣಿಸಿಕೊಂಡಿದ್ದರು. ಸದ್ಯ ಅವರು ರಿಯಾಲಿಟಿ ಶೋ ತೀರ್ಪುಗಾರ್ತಿಯಾಗಿದ್ದು, ನೃತ್ಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಶಕ್ತಿ ತಂಗಿ ಮುಕ್ತಿ ಕೂಡ ಡಾನ್ಸರ್​ ಆಗಿದ್ದು, ಅಕ್ಕ ನಿತಿ ಮೋಹನ್​ ಬಾಲಿವುಡ್​ನಲ್ಲಿ ಸಿಂಗರ್​ ಆಗಿ ತಮ್ಮದೇ ಛಾಪು ಮೂಡಿಸಿದ್ದಾರೆ. ಮುಕ್ತಿ ಮತ್ತು ನೀತಿ ಇಬ್ಬರೂ ಮದುವೆಯಾಗಿದ್ದು, 40 ದಾಟಿದ ಬಳಿಕವೂ ಶಕ್ತಿ ಮಾತ್ರ ಸಿಂಗಲ್​ ಆಗಿದ್ದಾರೆ. ಅಕ್ಕ ಮತ್ತು ತಂಗಿ ಇಬ್ಬರೂ ಮದುವೆಯಾಗಿದ್ದು, ತಾವು ಒಂಟಿಯಾಗಿರುವ ಬಗ್ಗೆ ಇತ್ತೀಚೆಗಷ್ಟೆ ಮೌನ ಮುರಿದಿರುವ ಶಕ್ತಿ, "ಈ ಹಿಂದೆ ನನಗಾದ ಮೋಸವೇ ಅದಕ್ಕೆ ಕಾರಣ. ನಾನೂ ಒಬ್ಬ ಹುಡುಗನನ್ನು ಮೂರು ವರ್ಷಗಳ ಕಾಲ ಪ್ರೀತಿಸಿದ್ದೆ. ಆದರೆ, ಆತ ನನ್ನ ಜತೆ ಸಂಬಂಧದಲ್ಲಿರುವಾಗಲೇ ಮತ್ತೊಬ್ಬಳ ಸಂಗ ಮಾಡಿ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ. ಅಮ್ಮನಿಗೆ ವಿಷಯ ತಿಳಿಸಿದೆ. ಹುಡುಗರೇ ಹಾಗೆ, ಆತ ಒಳ್ಳೆಯವ, ಮುಂದೆ ಸರಿಹೋಗುತ್ತಾನೆ ಅಂದರು. ಎಲ್ಲ ಹುಡುಗರೂ ಹಾಗಿದ್ದರೆ ನನಗೆ ಹುಡುಗರ ಸಹವಾಸವೇ ಬೇಡ ಅಂತ ಬ್ರೇಕಪ್​ ಮಾಡಿಕೊಂಡೆ. ಆ ಬಳಿಕ ತಿಂಗಳುಗಟ್ಟಲೆ ಕಣ್ಣೀರು ಹಾಕಿದೆ. ನನಗೀಗ ಮತ್ತೆ ಪ್ರೀತಿಸುವ ಯಾವುದೇ ಆಸೆಯಿಲ್ಲ. ಏಕೆಂದರೆ ನನಗೆ ಹುಡುಗರ ಮೇಲೆ ನಂಬಿಕೆಯೇ ಇಲ್ಲ. ಜತೆಗೆ ಮಗು ಮಾಡಿಕೊಳ್ಳುವ ಅಭಿಲಾಷೆಯೂ ಇಲ್ಲ' ಎಂದು ಹೇಳಿಕೊಂಡಿದ್ದಾರೆ. ಸದ್ಯ ಶಕ್ತಿಯ ಹೇಳಿಕೆ ಜಾಲತಾಣದಲ್ಲಿ ಭರ್ಜರಿ ಚರ್ಚೆಗೆ ಕಾರಣವಾಗಿದೆ. &ಏಜೆನ್ಸೀಸ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net