ನೀವೆಲ್ಲ 60% ನಾವು 50%! ಆದರೂ... ಹಿರಿಯ ನಟ ಅನುಪಮ್​ ಖೇರ್​ ಹೇಳಿಕೆಗೆ ನೆಟ್ಟಿಗರು ಕೆಂಡ

ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್
ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಹೇಳಿಕೆ
  • 'ದಿ ಕಪಿಲ್​ ಶರ್ಮ ಶೋ' ಕಾರ್ಯಕ್ರಮದ ವೇದಿಕೆಯಲ್ಲಿ ಮಾತು
  • ದ್ವಿತೀಯ ಪಿಯು ಮಾರ್ಕ್ಸ್​ ಬಗ್ಗೆ ನಡೆದ ಸಂಭಾಷಣೆಗೆ ಟೀಕೆ
ಮುಂಬೈ: ಬಾಲಿವುಡ್​ನಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಹಿಂದಿಯ ಕಪಿಲ್ ಶರ್ಮ ಶೋ ಬಹುತೇಕರಿಗೆ ಗೊತ್ತೇ ಇದೆ. ಈ ಒಂದು ಕಾರ್ಯಕ್ರಮಕ್ಕೆ ಕೇವಲ ಹಿಂದಿಗರು ಮಾತ್ರವಲ್ಲ, ಹಲವು ಭಾಷೆಯ ವೀಕ್ಷಕರಿದ್ದಾರೆ. ಸ್ಟಾರ್​ ಸೆಲೆಬ್ರಿಟಿಗಳು ಆಗಮಿಸುವ ವೇದಿಕೆಯಲ್ಲಿ ಕಪಿಲ್​ ಶರ್ಮ ಮಾಡುವ ಹಾಸ್ಯಚಟಾಕಿ ನೋಡುಗರಲ್ಲಿ ನಗೆ ತರಿಸುತ್ತದೆ. ಕಾಮಿಡಿ ಜೊತೆಗೆ ಕೆಲವೊಮ್ಮೆ ವಿವಾದಕ್ಕೂ ಗುರಿಯಾಗುವ ಈ ಶೋ, ಇದೀಗ ಮತ್ತೊಮ್ಮೆ ಹಿರಿಯ ನಟ ಅನುಪಮ್​ ಖೇರ್ ನೀಡಿದ ಹೇಳಿಕೆಯಿಂದ ಸುದ್ದಿಗೆ ಬಂದಿದೆ.
ಇತ್ತೀಚೆಗೆ ನಡೆದ ಒಂದು ಸಂಚಿಕೆಯಲ್ಲಿ ಬಾಲಿವುಡ್​ ಚಿತ್ರರಂಗದ ಹಲವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ, ನಟಿ ಫಾತೀಮಾ ಸನಾ ಶೈಕ್​ಗೆ ಪ್ರಶ್ನಿಸಿದ ಕಪಿಲ್​, ದ್ವಿತೀಯ ಪಿಯುನಲ್ಲಿ ನಿಮ್ಮ ಶ್ರೇಣಿ ಅಥವಾ ಪರ್ಸಂಟೇಜ್​ ಎಷ್ಟು ಎಂದರು. ಇದಕ್ಕೆ ಯೋಚಿಸಿ ಉತ್ತರಿಸಿದ ನಟಿ, ನಾನು ಕೇವಲ ಶೇ.55ರಷ್ಟು ಪಡೆದೆ. ಇದನ್ನು ಯಾರ ಬಳಿಯಾದರೂ ಅಥವಾ ಯಾರಿಗಾದರೂ ಹೇಳಬೇಕೆಂದರೆ ಬಹಳ ಕಷ್ಟವಾಗುತ್ತೆ. ಒಳ್ಳೆಯ ಅಂಕ ಗಳಿಸದ ಕಾರಣಕ್ಕೆ ನಾನು ಶಿಕ್ಷಣ ಅರ್ಧಕ್ಕೆ ಬಿಟ್ಟೆ ಎಂದು ಹೇಳಿದರು.
ನಟಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕಪಿಲ್​, ಇರಲಿ ಪರವಾಗಿಲ್ಲ. ಇಲ್ಲಿ ಕೆಲವರು 39% ಕೂಡ ಪಡೆದಿರುತ್ತಾರೆ. ಹಾಗೆ ನೋಡುವುದಾದರೆ, ಗುಡ್​ ನೀವು 55 ಪರ್ಸಟೆಂಜ್​ ಆದರೂ ಪಡೆದಿದ್ದೀರಿ ಎಂದರು. ಈ ಮಾತುಕತೆಗೆ ಮಧ್ಯಪ್ರವೇಶಿಸಿದ ಅನುಮಪ್ ಖೇರ್​, ನಾವ್ಯಾಕೆ ಶ್ರೇಣಿಗಳ ಮೇಲೆ ಗಮನ ಹರಿಸಿದ್ದೀವಿ? ಹಾಗಿದ್ದರೆ, ಒಂದು ಸಣ್ಣ ಆಟ ಆಡೋಣ. ಕುಳಿತಿರುವ ಆಡಿಯನ್ಸ್ ಪೈಕಿ ಯಾರು ನಿಮ್ಮ ದ್ವಿತೀಯ ಪಿಯುನಲ್ಲಿ ಶೇ.60ಕ್ಕಿಂತ ಹೆಚ್ಚು ತಗೊಂಡಿದ್ದೀರಾ ಕೈಎತ್ತಿ ನೋಡೋಣ ಎಂದು ಕೇಳಿದರು.
ಈ ವೇಳೆ ಹಲವರು ಕೈಎತ್ತಿದ್ದನ್ನು ನೋಡಿ, 60% ಪಡೆದವರೆಲ್ಲ ಕೆಳಗೆ ಕುಳಿತು ನಾವು ಹೇಳುವುದನ್ನು ಆಲಿಸುತ್ತಿದ್ದೀರಾ. 50%ಕ್ಕಿಂತ ಕಡಿಮೆ ಪಡೆದ ನಾವುಗಳು ವೇದಿಕೆ ಮೇಲೆ ನಿಂತು ಮಾತನಾಡುತ್ತಿದ್ದೇವೆ ಎಂದು ಹೇಳಿದರು. ಹಿರಿಯ ನಟನ ಈ ಹೇಳಿಕೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಹಾಸ್ಯಸ್ಪದವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಟೀಕಿಸುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net