ಒಂದೇ ವೃತ್ತಿಜೀವನದಲ್ಲಿ ಅಪ್ಪ-ಮಗ: ಅಭಿಮಾನಿಗಳು ಹೋಲಿಸಿದರೆ ಅಭಿಷೇಕ್ ಏನಂತಾರೆ ಗೊತ್ತಾ? Abhishek Bachchan

Abhishek Bachchan (ಚಿತ್ರ Instagram)
Abhishek Bachchan (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಪ್ರತಿಭಾವಂತ ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
  • 'ಗುರು', 'ಸರ್ಕಾರ್' ಮತ್ತು 'ಬಂಟಿ ಔರ್ ಬಬ್ಲಿ'ಯಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಎಂಟ್ರಿ
  • ಒಬ್ಬ ಸ್ಟಾರ್​ ಮಗನಾಗಿ ಬೆಳೆಯುವುದು ಮತ್ತು ಅದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಎಷ್ಟು ದೊಡ್ಡ ಸವಾಲು
Abhishek Bachchan: ಬಾಲಿವುಡ್‌ನ ಪ್ರತಿಭಾವಂತ ನಟ ಅಭಿಷೇಕ್ ಬಚ್ಚನ್ ಇಂದು (ಫೆಬ್ರವರಿ 5) ತಮ್ಮ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'ಗುರು', 'ಸರ್ಕಾರ್' ಮತ್ತು 'ಬಂಟಿ ಔರ್ ಬಬ್ಲಿ'ಯಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದಂತ ನಟ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಮೈಲಿಗಲ್ಲಿನ ಸಂದರ್ಭದಲ್ಲಿ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಒಬ್ಬ ಸ್ಟಾರ್​ ಮಗನಾಗಿ ಬೆಳೆಯುವುದು ಮತ್ತು ಅದೇ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಎಷ್ಟು ದೊಡ್ಡ ಸವಾಲೋ, ಅಷ್ಟೇ ದೊಡ್ಡ ಜವಾಬ್ದಾರಿ ಕೂಡ ಆಗಿರುತ್ತದೆ. ಆದರೆ, ಅಭಿಷೇಕ್ ಇದನ್ನು ವಿಭಿನ್ನವಾಗಿ ನೋಡುತ್ತಾರೆ. ಆದಾಗ್ಯೂ, ಅಮಿತಾಬ್ ಬಚ್ಚನ್ ಅವರನ್ನು ತಂದೆ ಮತ್ತು ಒಂದೇ ವೃತ್ತಿಯ ಸೂಪರ್‌ಸ್ಟಾರ್ ಆಗಿ ಪಡೆದಿರುವುದನ್ನು ಪ್ರತಿಬಿಂಬಿಸುತ್ತಾ, "ನನ್ನ ಜೀವನವು ತುಂಬಾ ಸಂಕೀರ್ಣವಾಗಿದೆ" ಎಂದು ಅಭಿಷೇಕ್​ ತಿಳಿಸಿದ್ದಾರೆ.
ಸಿಮಿ ಗರೇವಾಲ್ ಅವರ ಹಳೆಯ ಸಂದರ್ಶನವೊಂದರಲ್ಲಿ, ಅಭಿಷೇಕ್ ಬಚ್ಚನ್ ಅವರನ್ನು ಅದೇ ವೃತ್ತಿಯಲ್ಲಿ ಕೆಲಸ ಮಾಡುವ ಸೂಪರ್​ ಸ್ಟಾರ್​ ಮಗನಾಗಿ ಬೆಳೆಯುವುದರ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್​, ನನ್ನ ಜೀವನ ತುಂಬಾ ಜಟಿಲವಾಗಿದೆ. ಯಾವುದೇ ಮಗು ಕನಸು ಕಾಣಬಹುದಾದ ಎಲ್ಲವನ್ನೂ ನಾನು ಮಾಡಿದ್ದೇನೆ. ನಾನು ಒಬ್ಬ ದಂತಕಥೆಯ ಮಗನಾಗಿರುವುದು ಬಹಳ ಗೌರವ, ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಭಾವಿಸುತ್ತೇನೆ ಎಂದಿದ್ದರು.
ತಮ್ಮ ತಂದೆ ಅಮಿತಾಬ್ ಬಚ್ಚನ್ ಅವರೊಂದಿಗೆ ಸತತವಾಗಿ ಹೋಲಿಕೆ ಮಾಡುವುದರ ಬಗ್ಗೆ ಕೇಳಿದಾಗ, ನನ್ನನ್ನು ಸದಾ ಅತ್ಯುತ್ತಮವಾದವರ ಜೊತೆಯಲ್ಲಿ ಅಳೆಯಲಾಗುತ್ತಿದೆ ಎಂದರೆ, ನಾನು ಶ್ರೇಷ್ಠ ಮಟ್ಟದಲ್ಲಿದ್ದೇನೆ ಎಂದರ್ಥ. ಅದನ್ನು ನಾನು ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ ಎಂದರು.
ಅಮಿತಾಬ್​ ಅವರನ್ನು ಒಬ್ಬ ಪ್ರತಿಸ್ಪರ್ಧಿಯಾಗಿ ನೋಡುತ್ತೀರಾ? ಮತ್ತು ನೀವು ಅದರಿಂದ ಹೊರಬರಲು ಬಯಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್​ ಪ್ರತಿಯೊಬ್ಬ ಮಗುವು ತನ್ನ ತಂದೆಯಿಂದ ಹೊರ ಬರಲು ಪ್ರಯತ್ನಿಸುವುದು ಒಂದೇ ಕಾರಣಕ್ಕೆ ಅದು ತಮ್ಮ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು. ನಾನು ಅದನ್ನೇ ಪ್ರಯತ್ನಿಸುತ್ತೇನೆಯೇ ಹೊರತು ಅವರಿಂದ ಹೊರ ಬರಲು ಪ್ರಯತ್ನಿಸುವುದಿಲ್ಲ. ಏಕೆಂದರೆ, ತಂದೆಯ ನೆರಳಿನಲ್ಲಿ ಬದುಕುವುದು ಅದ್ಭುತವಾದ ಆಶ್ರಯ ಎಂದು ಹೇಳಿದ್ದರು.
ತಂದೆಯೊಂದಿಗೆ ನಿರಂತರವಾಗಿ ಹೋಲಿಕೆ ಮಾಡುವುದರ ಬಗ್ಗೆ ಅಭಿಷೇಕ್ ಕಿಂಚಿತ್ತೂ ಬೇಸರವಿಲ್ಲ. ನಾನು ನಿಜವಾಗಿಯೂ ಅವರ ದೊಡ್ಡ ಅಭಿಮಾನಿ. ನನ್ನ ತಂದೆಯೊಂದಿಗೆ ಕಾಣುವುದು ಮತ್ತು ಅವರೊಂದಿಗೆ ಹೋಲಿಸಿಕೊಳ್ಳುವುದರಿಂದ ನನಗೇನು ತೊಂದರೆ ಇಲ್ಲ. ಆದಾಗ್ಯೂ, ನನ್ನ ವೈಯಕ್ತಿಕ ಸಾಧನೆಯ ಬಗ್ಗೆ ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತೇನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸವನ್ನು ಮಾಡುವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇನೆಯೇ ಹೊರತು, ಬೇರೆ ವಿಚಾರಗಳಿಗೆ ಅಲ್ಲ. ಮನೆಯಲ್ಲಿ ಉತ್ತಮ ಪೋಷಕರಿದ್ದಾರೆ. ನನ್ನನ್ನು ಪ್ರೀತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದರು.

ಅಭಿಷೇಕ್ ಬಚ್ಚನ್ ಅವರ ಕೆಲಸದ ಮುಂಭಾಗ

ಕೆಲಸದ ವಿಚಾರಕ್ಕೆ ಬಂದರೆ, ನಟ ಕೊನೆಯ ಬಾರಿಗೆ 2025 ರಲ್ಲಿ ಬಿಡುಗಡೆಯಾದ ಕಾಳಿಧರ್ ಲಾಪಾಟ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅವರು ಆರಂಭಿಕ ಹಂತದ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಮಧ್ಯ ವಯಸ್ಕ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವನ್ನು ಮಧುಮಿತಾ ಸುಂದರರಾಮನ್ ನಿರ್ದೇಶಿಸಿದ್ದಾರೆ. ಅವರ ಮುಂದಿನ ಸಿನಿಮಾ ರಿತೇಶ್ ದೇಶಮುಖ್ ನಿರ್ದೇಶನದ ರಾಜಾ ಶಿವಾಜಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಮೇ 1, 2026 ರಂದು ಬಿಡುಗಡೆಯಾಗಲಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net