'ಆಕೆ ಡಿವೋರ್ಸ್ ಕೊಟ್ಮೇಲೆ ದೇವದಾಸನಂತೆ ಕುಡುಕನಾಗಿದ್ದೆ'; ಮಿಸ್ಟರ್​​ ಪರ್ಫೆಕ್ಟ್​ ಅಮೀರ್​ ಖಾನ್​ ಹೇಳಿದ್ಯಾರ ಬಗ್ಗೆ?..Amir Khan

Aamir Khan, Reen Datta
Aamir Khan, Reen Datta
Published on

ಪ್ರಮುಖ ಮುಖ್ಯಾಂಶಗಳು

  • ರೀನಾ ದತ್ತಾರಿಂದ ಡಿವೋರ್ಸ್​ ಪಡೆದುಕೊಂಡಾಗ ನಾನು ದಿನ ಒಂದು ಬಾಟಲಿ ಡ್ರಿಂಕ್ಸ್​ ಮಾಡ್ತಿದ್ದೆ
  • 2005ರಲ್ಲಿ ಕಿರಣ್​ ರಾವ್​ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಅಮೀರ್​ ಖಾನ್​
  • ರೀನಾ ದತ್ತಾ ಜೊತೆಗೆ 16 ವರ್ಷ ಕಳೆದ ದಾಂಪತ್ಯ ಜೀವನದ ಬಗ್ಗೆ ಅಮೀರ್​ ಮಾತು
Aamir Khan, Reena Dutta Divorce: 3 ಈಡಿಯಟ್ಸ್​, ಪಿಕೆ, ದಂಗಲ್, ಫನಾ​ದಂತಹ ಬ್ಲಾಕ್​ ಬಸ್ಟರ್​ ಸಿನಿಮಾ ಕೊಟ್ಟ ಮಿಸ್ಟರ್​ ಪರ್ಫೆಕ್ಟ್​  ಅಮೀರ್​ ಖಾನ್​ರನ್ನು ಅವರ ನಟನೆಯಲ್ಲಂತೂ ಮೀರಿಸಲಾಗದು. ಜೊತೆಗೆ ಅವರ ಖಾಸಗಿ ವಿಚಾರಗಳು, ವೈವಾಹಿಕ ಜೀವನ ಮತ್ತು ಪ್ರೇಮ ಎಂದು ಬಂದಾಗ ಸದಾ ಸುದ್ದಿಯಲ್ಲಿರುತ್ತಾರೆ.  ರೀನಾ ದತ್ತಾ ಜೊತೆಗಿನ ಡಿವೋರ್ಸ್​ ನಂತರ, ಕಿರಣ್​ ರಾವ್​ ಅವರನ್ನು ಮದುವೆಯಾಗಿ ದೂರ ಮಾಡಿಕೊಂಡಿದ್ದು, ಕೊನೆಗೆ ಗೌರಿ ಸ್ಪ್ರಾಟ್ ಜೊತೆಗೆ ಲವ್ ಆಗಿ ಈ ವೈವಾಹಿಕ ಜೀವನ ನಡೆಸುತ್ತಿರುವ ಬಗ್ಗೆ  ಪಾರದರ್ಶಕವಾಗಿ ತಮ್ಮ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ಅಮೀರ್​ ಖಾನ್​ ರೀನಾ ವೈವಾಹಿಕ ಜೀವನ

ಈಗ ಮಿಸ್ಟರ್​​ ಪರ್ಫೆಕ್ಟ್​ ಅಮೀರ್​ ಖಾನ್​ ತಮ್ಮ ಜೀವನದಲ್ಲಿ ಅನುಭವಿಸಿದ ಕಷ್ಟಕರ ಘಟ್ಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅದುವೇ ರೀನಾ ದತ್ತಾ ಹಾಗೂ ಅವರ ಮಧ್ಯೆ ನಡೆದಿದ್ದ ಡಿವೋರ್ಸ್​​ ಪ್ರಸಂಗ. ರೀನಾ ದತ್ತಾ 'ಲಗಾನ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. 1986ರಲ್ಲಿ ರೀನಾ ದತ್ತಾ ಜೊತೆಗೆ ಹಸೆಮಣೆ ಏರುವ ಅಮೀರ್​​ ಖಾನ್​ 16 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಕೊನೆಗೆ  2002ರಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಾರೆ. ಈ ಸಮಯದಲ್ಲಿ ಅವರು ಮದ್ಯವ್ಯಸನಿ ಆಗಿದ್ದ ಬಗ್ಗೆ  ಹಾಗೂ ಅಂದು ಭಾವನಾತ್ಮಕವಾಗಿ ಅನುಭವಿಸಿದ ನೋವಿನ ಬಗ್ಗೆ ಅವರು ಮಾತನಾಡಿದ್ದಾರೆ.  

ಕುಡುಕನಾಗ್ಬಿಟ್ಟಿದ್ದೆ

ಡ್ಯುಯೊಲಾಗ್ ವಿತ್ ಬರುನ್ ದಾಸ್ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2002ರಲ್ಲಿ ರೀನಾ ದತ್ತಾರಿಂದ ಡಿವೋರ್ಸ್​ ಪಡೆದುಕೊಂಡ ನಂತರ, ಆಕೆ ಮಕ್ಕಳೊಂದಿಗೆ ಹೊರಟು ಹೋದಳು. ಆಕೆ ನಿರ್ಗಮಿಸಿದ ಮೊದಲ ದಿನ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ.  ಮೊದಲ ದಿನವೇ ಒಂದು ಬಾಟಲ್​ ಮದ್ಯ ಸೇವಿಸಿದೆ ಮುಂದಿನ ಸುಮಾರು ಒಂದೂವರೆ ವರ್ಷಗಳ ಕಾಲ ನಾನು ಪ್ರತಿ ರಾತ್ರಿ ಒಂದು ಬಾಟಲಿ ಮದ್ಯ  ಸೇವಿಸಿ ಮಲಗುತ್ತಿದ್ದೆ. ಇದಕ್ಕೂ ಮೊದಲು ನಾನೆಂದು ಡ್ರಿಂಕ್ಸ್​ ಮಾಡೇ ಇರಲಿಲ್ಲ. ಸಿನಿಮಾಗಾಗಿ ಒಂದೆರೆಡು ಬಾರಿ ಕುಡಿದ್ದಿದ್ದೇನೆ ವಿನಃ. ಡ್ರಿಂಕ್ಸ್​ ಮಾಡುವ ಅಭ್ಯಾಸವೇ ಇರಲಿಲ್ಲ ಎಂದು ತಮ್ಮ ಹಲವು ವರ್ಷಗಳ ಮನದಾಳದ ಮಾತನ್ನು ಮುಂದಿಟ್ಟಿದ್ದಾರೆ. 
ಡಿವೋರ್ಸ್​ ಆದ ಕಾಲಮಾನದಲ್ಲಿ ನಾನು ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಒಬ್ಬನೇ ಇರುತ್ತಿದ್ದೆ. ಯಾರನ್ನು ಭೇಟಿಯೂ ಮಾಡುತ್ತಿರಲಿಲ್ಲ.  ನಾನು ಅಕ್ಷರಶಃ ದೇವ್​ದಾಸ್​ನಂತಾಗಿದ್ದೆ. ನನ್ನನ್ನು ಹಾಗೂ ನನ್ನ ಭಾವನೆಗಳನ್ನು ಹಿಡಿತದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಅಮೀರ್​ ಖಾನ್​ ಮದುವೆ ಜೀವನ

1986 ಆಗ ಅಮೀರ್​ ಖಾನ್​ರಿಗೆ 21 ವಯಸ್ಸು ಆಗಲೇ ಅವರು ರೀನಾ ದತ್ತಾರನ್ನು ಮದುವೆ ಮಾಡಿಕೊಂಡರು. ಅಲ್ಲಿಂದ 16 ವರ್ಷ ದಾಂಪತ್ಯ ಜೀವನ ನಡೆಸಿದರು. 2002ರಲ್ಲಿ ಇಬ್ಬರು ಡಿವೋರ್ಸ್​ ಕೊಟ್ಟುಕೊಂಡರು. ಅಮೀರ್​ ಖಾನ್​  2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು ಮತ್ತು ಇಬ್ಬರೂ 2021ರಲ್ಲಿ ಇಬ್ಬರು ತಮ್ಮ ಡಿವೋರ್ಸ್​ ಬಗ್ಗೆ ಬಹಿರಂಗ ಪಡಿಸಿದರು.
ಅಮೀರ್ ಖಾನ್ ರೀನಾ ದತ್ತಾ ಅವರಿಗೆಗೆ ಇರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳಿದ್ದಾರೆ. ಕಿರಣ್ ರಾವ್ ರಿಗೆ ಮಗ ಆಜಾದ್‌ಗೆ ಎಂಬ ಮಗನೂ ಇದ್ದಾನೆ. ಮಾರ್ಚ್ 14, 2025 ರಂದು ಅವರ 60 ನೇ ಹುಟ್ಟುಹಬ್ಬದ ಮುನ್ನಾದಿನದಂದು, ನಟ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಸಾರ್ವಜನಿಕರಿಗೆ ಪರಿಚಯಿಸುವ ಮೂಲಕ ಸುದ್ದಿಯಲ್ಲಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net