ನಟ ಆಮಿರ್ ಖಾನ್ 18 ಕೆಜಿ ಇಳಿಸಿದ್ದೇಕೆ? ಕಾರಣ ಕೇಳಿದ್ರೆ ಅಚ್ಚರಿ ಪಡೋದಂತೂ ಗ್ಯಾರಂಟಿ! Aamir Khan

Aamir Khan (ಚಿತ್ರ Instagram)
Aamir Khan (ಚಿತ್ರ Instagram)
Published on
ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ (AamirKhan) 2026 ಕ್ಕೆ ಕಾಲಿಡುತ್ತಿದ್ದಂತೆಯೇ ತಮ್ಮ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಅವರು ಕೇವಲ ಸಿನಿಮಾ ಪಾತ್ರಗಳಿಗಾಗಿ ಅಥವಾ ಸೌಂದರ್ಯಕ್ಕಾಗಿ ಅಲ್ಲದೇ,  ದೀರ್ಘಕಾಲದ ಮೈಗ್ರೇನ್  ಸಮಸ್ಯೆಯನ್ನು ಹೋಗಲಾಡಿಸಲು 18 ಕೆಜಿಗಳಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ  ಹ್ಯಾಪಿ ಪಟೇಲ್ ಖತರ್ನಾಕ್ ಜಾಸೂಸ್  ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಅವರು ಹೇಗೆ 18 ಕೆಜಿ ತೂಕ ಇಳಿಸಿಕೊಂಡೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.
ಆದಾಗ್ಯೂ, ನಟ ಈ ಗಣನೀಯ ಇಳಿಕೆಯು ಆರೋಗ್ಯದ ದೃಷ್ಟಿಯಿಂದ ನಾನು ಅನುಸರಿಸುತ್ತಿರುವ ಹೊಸ ಆಹಾರ ಕ್ರಮವು ನನಗೆ ಮ್ಯಾಜಿಕ್‌ನಂತೆ ಸಹಾಯ ಮಾಡುತ್ತಿದೆ. ಈ ಗಣನೀಯ ತೂಕ ಇಳಿಕೆಯು ನಾನು ನಿರೀಕ್ಷಿಸದಿದ್ದರೂ, ಆರೋಗ್ಯದ ಹಾದಿಯಲ್ಲಿ ಸಹಜವಾಗಿ ಸಂಭವಿಸಿದೆ ಎಂದಿದ್ದಾರೆ.
ನಾನು ಮೈಗ್ರೇನ್​ನಿಂದ ತುಂಬಾ ಬಳಲುತ್ತಿದ್ದೆ, ಆ ಸಂದರ್ಭದಲ್ಲಿ ಈ ಆಹಾರ ಕ್ರಮವನ್ನು ತೆಗೆದುಕೊಂಡೆ, ಇದು ಉರಿಯೂತ ನಿವಾರಕ ಆಹಾರ ಕ್ರಮವಾಗಿದ್ದು, ಇದು ನನ್ನ 18 ಕೆಇಜಿ ತೂಕವನ್ನು ಇಳಿಸುವುದರ ಜೊತೆಗೆ ಮೈಗ್ರೇನ್​ ಸಮಸ್ಯೆಯನ್ನೂ ಗಣನೀಯವಾಗಿ ಕಡಿಮೆ ಮಾಡಿತು ಎಂದು ಹೇಳಿದರು.

ಉರಿಯೂತ ನಿವಾರಕ ಆಹಾರ ಪದ್ಧತಿ ಎಂದರೇನು?

ಉರಿಯೂತ ನಿವಾರಕ (Anti-inflammatory) ಆಹಾರ ಪದ್ಧತಿ ಎಂದರೆ ದೇಹದ ಒಳಗಿನ ಉರಿಯೂತ ಮತ್ತು ದೀರ್ಘಕಾಲದ ನೋವುಗಳನ್ನು ಕಡಿಮೆ ಮಾಡುವ ಆಹಾರ ಕ್ರಮವಾಗಿದೆ. ಇದು ಸಂಸ್ಕರಿಸಿದ ಸಕ್ಕರೆ, ಎಣ್ಣೆ ಮತ್ತು ಜಂಕ್​ ಫುಡ್​​ಗಳನ್ನು ಸೇವಿಸುವ ಬದಲಿಗೆ ಪೌಷ್ಟಿಕಾಂಶವಿರುವ ಹಣ್ಣುಗಳು, ತರಕಾರಿಗಳು, ದ್ವಿದಳ ಧಾನ್ಯಗಳು, ಒಮೆಗಾ-3 ಯಿಂದ ಸಮೃದ್ಧವಾಗಿರುವ ಮೀನು ಮತ್ತು ನಟ್ಸ್‌ಗಳಿಗೆ ಆದ್ಯತೆ ನೀಡುತ್ತದೆ. ಈ ಆಹಾರಗಳು ಮೈಗ್ರೇನ್, ಸಂಧಿವಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಆಮಿರ್ ಖಾನ್​ ತಮ್ಮ ಊಟದ ಯೋಜನೆಯ ವಿವರಗಳ ಬಗ್ಗೆ ವಿವರಣೆ ನೀಡದೆ ಇದ್ದರೂ, ಸಹ ಅವರ ಆಹಾರಕ್ರಮದಲ್ಲಾದ ಬದಲಾವಣೆಯಿಂದ ಗೋಚರ ತೂಕ ನಷ್ಟಕ್ಕೆ ಕಾರಣವಾಗಿದ್ದು, ಇದು ಅರ್ಥಪೂರ್ಣ ಆರೋಗ್ಯ ಪ್ರಯೋಜನಗಳನ್ನು ನೀಡಿದೆ ಎಂದು ಅವರ ಅನುಭವವು ತಿಳಿಸುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net