ಗೌರಿ ಸ್ಪ್ರ್ಯಾಟ್ ಕಳೆದ ಕೆಲವು ವರ್ಷಗಳಿಂದ ಅಮೀರ್ ಖಾನ್ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ. 2025ರಲ್ಲಿ ಆಮೀರ್ ಅವರ 60ನೇ ಜನ್ಮದಿನದಂದು ಈ ಜೋಡಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿತ್ತು. ಗೌರಿ ಅವರ ತಂದೆ ಬ್ರಿಟಿಷ್ ಮೂಲದವರಾದರೆ, ತಾಯಿ ಪಂಜಾಬಿ ಮೂಲದವರು. ಲಂಡನ್‌ನಲ್ಲಿ ಕಲೆ ಮತ್ತು ಫ್ಯಾಷನ್ ಶಿಕ್ಷಣ ಪಡೆದಿರುವ ಗೌರಿ, ಸದ್ಯ ಮುಂಬೈನಲ್ಲಿ ಆಮೀರ್ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ಈ ಜೋಡಿ ಶೀಘ್ರದಲ್ಲೇ ವಿವಾಹವಾಗಲಿದೆ ಎಂಬ ವದಂತಿಗಳೂ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.