1300 ಮಂದಿಯ ಆಡಿಷನ್ ಬಳಿಕ, ಬಾಲನಟಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಸಾರಾ ಅರ್ಜುನ್ ನಮ್ಮ ಗಮನಕ್ಕೆ ಬಂದರು ಎಂದು ಕಾಸ್ಟಿಂಗ್ ತಂಡದ ನಿರ್ದೇಶಕರು ತಿಳಿಸಿದ್ದಾರೆ. ಈ ಮೆಗಾ ಪ್ರಾಜೆಕ್ಟ್‌ಗೆ ಕೊನೆಗೆ ಅವರನ್ನೇ ನಾವು ಫೈನಲ್ ಮಾಡಿದೆವು. ಆಡಿಷನ್ ಸಮಯದಲ್ಲಿ ಅವರ ಪ್ರತಿಭೆ ಮತ್ತು ಸ್ಕ್ರೀನ್ನಲ್ಲಿ ನಟಿಸಿದ ರೀತಿ, ತಯಾರಕರನ್ನು ಮೆಚ್ಚಿಸಿತು. ಹೀಗಾಗಿ, ರಣವೀರ್ ಸಿಂಗ್ ಅವರಿಗೆ ನಾಯಕಿಯಾಗುವ ಅವಕಾಶ ಅವರ ಪಾಲಾಯಿತು ಎಂದಿದ್ದಾರೆ,(ಏಜೆನ್ಸೀಸ್).