

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತು ಟೀಮ್ ಇಂಡಿಯಾ ಕ್ರಿಕೆಟಿಗ ರಿಷಭ್ ಪಂತ್ ನಡುವಿನ ಪ್ರೀತಿ, ದ್ವೇಷ ಮಿಶ್ರಿತ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. 2018ರಲ್ಲಿ ರಿಷಭ್ ಮತ್ತು ಊರ್ವಶಿ ಇಬ್ಬರೂ ಜೊತೆಯಲ್ಲಿ ಓಡಾಡುತ್ತಿದ್ದ ಕುರಿತು ಸುದ್ದಿಯಾಗಿತ್ತು. ನಂತರ 2019ರಲ್ಲಿ ಊರ್ವಶಿಗೂ, ತನಗೂ ಸಂಬಂಧವೇ ಇಲ್ಲ ಅಂತ ರಿಷಭ್ ಗರ್ಲ್ಫ್ರೆಂಡ್ ಇಶಾ ನೇಗಿಯನ್ನು ಪರಿಚಯಿಸಿದ್ದರು. ಆದರೆ, ಇತ್ತ ರಿಷಭ್ ದೂರಾದಂತೆ, ಊರ್ವಶಿ ಅವರಿಗೆ ಮತ್ತಷ್ಟು ಹತ್ತಿರವಾಗಲು ಯತ್ನಿಸುತ್ತಿರುವಂತಿದೆ.
ಕೆಲವು ದಿನಗಳ ಹಿಂದಷ್ಟೇ ಊರ್ವಶಿ ಭಾರತ, ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಹೋಗಿದ್ದರು. ಅದರ ಬೆನ್ನಲ್ಲೇ ಭಾರತವೀಗ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಅಲ್ಲಿಗೂ ಅವರು ತೆರಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಊರ್ವಶಿ, ‘ನನ್ನ ಹೃದಯವನ್ನು ಹಿಂಬಾಲಿಸಿದೆ. ಅದು ನನ್ನನ್ನು ಆಸ್ಟ್ರೇಲಿಯಾಗೆ ಕರೆದೊಯ್ಯಿತು’ ಎಂದು ಬರೆದುಕೊಂಡಿದ್ದಾರೆ.
ಹಾಗಂತ ಅವರು ಈ ರೀತಿ ಬರೆದುಕೊಂಡಿರುವುದು ಇದೇ ಮೊದಲೇನಲ್ಲ. ಬದಲಾಗಿ ರಿಷಭ್ ಪಂತ್ ಹುಟ್ಟುಹಬ್ಬದ ದಿನವೂ ಹೆಸರನ್ನು ಬಳಸದೇ ಶುಭಾಶಯದ ವಿಡಿಯೋ ಹಂಚಿಕೊಂಡಿದ್ದರು. ಇದೆಲ್ಲದ ರಿಂದ ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. -ಏಜೆನ್ಸೀಸ್