

ಕಾಸರಗೋಡು: ಅಡೂರು ಮಣಿಯೂರು ಮೂಲಡ್ಕ ನಿವಾಸಿ, ಪಿಕ್‌ಅಪ್ ಚಾಲಕ ಯೋಗೀಶ್(28) ಎಂಬುವರ ಮೃತದೇಹ ಮನೆ ಸನಿಹದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗ್ಗೆ ಯೋಗೀಶ್ ಮನೆಯಲ್ಲಿ ಇಲ್ಲದಿರುವುದರಿಂದ ಹುಡುಕಾಡುವ ಮಧ್ಯೆ ಮೃತದೇಹ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಆದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.