

ಪಡುಬಿದ್ರಿ: ಉದ್ಯಾವರ ಗ್ರಾಮದ ಪಡುಕೆರೆ ಪಂಡರೀನಾಥ ಭಜನಾ ಮಂದಿರದ ಹತ್ತಿರ ಪಾಪನಾಶಿನಿ ಹೊಳೆ ದಡದಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಗುರುವಾರ ಪತ್ತೆಯಾಗಿದೆ. ಹೊಳೆಯಲ್ಲಿ 35-40 ವರ್ಷದ ಪ್ರಾಯದ ಅಪರಿಚಿತ ಗಂಡಸಿನ ಶವ ತೇಲುತ್ತಿತ್ತು. ಸುಮಾರು ಮೂರ‌್ನಾಲ್ಕು ದಿನಗಳ ಹಿಂದೆ ಪಾಪನಾಶಿನಿ ನದಿಯಲ್ಲಿ ಮುಳುಗಿ ಮೃತಪಟ್ಟಿರಬಹುದೆಂದು ಪ್ರಕರಣ ದಾಖಲಿಸಿರುವ ಕಾಪು ಠಾಣೆ ಪೊಲೀಸರು ತಿಳಿಸಿದ್ದಾರೆ.