

ಕಡಬ: ವಿದ್ಯಾರ್ಥಿಗಳ ಅಭಿಲಾಷೆಯಂತೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡುವುದು ಪಾಲಕರ ಕರ್ತವ್ಯ. ಒಬ್ಬ ವ್ಯಕ್ತಿ ಸದೃಢ, ಸಮರ್ಥನಾಗಿ ಬೆಳೆಯಬೇಕಾದರೆ ಶಿಕ್ಷಣ ಬೇಕು. ಕೇವಲ ಉದ್ಯೋಗವನ್ನೆ ಅವಲಂಬಿಸಿ ಶಿಕ್ಷಣ ಕೊಡದೆ ಸ್ವಾವಲಂಬಿಯಾಗಿ ಬದುಕಲು ಬೇಕಾಗುವ ಶಿಕ್ಷಣ ನೀಡಿದರೆ ಬದುಕುವ ದಾರಿ ಹುಡುಕಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಕಾರ್ಯಕ್ರಮ ಉದ್ಘಾಟಿಸಿದರು.
ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್, ಗ್ರಾಪಂ ಸದಸ್ಯರಾದ ಸುನಂದಾ ಅಬ್ಬಡ, ಪ್ರವೀಣ್ ಚಂದ್ರ ರೈ, ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದಾ, ಕಾಣಿಯೂರು ಬ್ಯಾಂಕ್ ಆಫ್ ಬರೋಡಾ ಪ್ರಬಂಧಕ ಅತಿಥ್ ರೈ, ಬೊಬ್ಬೆಕೇರಿ ಶಾಲಾ ನಿವೃತ್ತ ಮುಖ್ಯಶಿಕ್ಷಕ ಸೋಮಪ್ಪ ಗೌಡ, ನಿವೃತ್ತ ಸೈನಿಕರಾದ ರವೀಂದ್ರ ಮರಕ್ಕಡ, ಗಿರಿಧರ ಕಡಿರ, ಧ.ಗ್ರಾ.ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ವೀಣಾ, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಹರೀಶ್ ಪೈಕ, ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ನಿವೃತ್ತ ಸೈನಿಕರಾದ ಮಹೇಶ್ ಪೈಕ, ಶಾಲಾ ವಿದ್ಯಾರ್ಥಿ ನಾಯಕಿ ಮನ್ವಿತಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಶಶಿಕಲಾ ವರದಿ ವಾಚಿಸಿದರು. ಶಿಕ್ಷಕರಾದ ಜನಾರ್ದನ ಹೇಮಳ ಸ್ವಾಗತಿಸಿ, ಗೀತಾಕುಮಾರಿ ವಂದಿಸಿ. ಶೋಭಿತಾ ನಿರೂಪಿಸಿದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಆರಂಭಗೊಂಡಿರುವ ಚಿಣ್ಣರ ಮಂಟಪ ಎಲ್‌ಕೆಜಿ ಮತ್ತು ಯು.ಕೆ.ಜಿ ತರಗತಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಯಿತು. ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಸುಕುಮಾರ್ ಕಲ್ಪಡ ಇದ್ದರು.
ಸಾಧಕರಿಗೆ ಗೌರವಾರ್ಪಣೆ
ಶಾಸಕಿ ಭಾಗೀರಥಿ ಮುರುಳ್ಯ, ನಿವೃತ್ತ ಅಂಚೆ ಇಲಾಖೆ ಸಿಬ್ಬಂದಿ ಸೀತಾರಾಮ ಗೌಡ ಸುಳ್ಯ, ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ದೀಪಕ್, ಬೊಬ್ಬೆಕೇರಿ ಶಾಲೆಯಲ್ಲಿ ಗೌರವ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವ ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ ಹಾಗೂ ಅಡುಗೆ ಸಿಬ್ಬಂದಿ ಶಶಿಕಲಾ, ಮಹಾಲಕ್ಷ್ಮೀ, ಲತಾ, ಶಾಲಾಭಿವೃದ್ಧಿಯಲ್ಲಿ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು.