ತಮಿಳುನಾಡು: ಆನೆಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಹೆಚ್ಚಿನ ಮಕ್ಕಳು ಆನೆಯನ್ನು ಇಷ್ಟಪಡುತ್ತಾರೆ. ಇಲ್ಲೊಂದು ಆನೆಯೊಂದು ತನ್ನ ವಿಭಿನ್ನ ಹೇರ್ ಸ್ಟೈಲ್ ನಿಂದ ಸುದ್ದಿಯಲ್ಲಿದೆ. ಈ ಆನೆಯು ವಿಶ್ವದ ಅತ್ಯಂತ ಸುಂದರವಾದ ಆನೆಗಳಲ್ಲಿ ಒಂದಾಗಿದೆ.
ಆನೆಯ ಹೆಸರು ಬಾಬ್‌ಕಟ್ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿದೆ. ಈ ಆನೆ ಬಾಬ್ ಕಟ್ ಹೇರ್ ಸ್ಟೈಲ್ ದೇಶಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದೆ. ಬಾಬ್ ಕಟ್ ಸೆಂಗಮಲಂ ಎಂದು ಕರೆಯಲ್ಪಡುವ ಈ ಆನೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
2003ರಲ್ಲಿ ಕೇರಳದಿಂದ ಸೆಂಗಮಲಂ ಆನೆಯನ್ನು ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಕರೆತರಲಾಗಿತ್ತು. ಮೌನಾ ಎಸ್ ರಾಜಗೋಪಾಲ್ ಈ ಆನೆ ಹೇರ್ ಸ್ಟೈಲ್ ನೋಡಿಕೊಳ್ಳುತ್ತಾರೆ. ಈ ಹೇರ್ ಸ್ಟೈಲ್ ಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿ ಅಗತ್ಯ ಎನ್ನುತ್ತಾರೆ ಮಾವುತ.
She is famously known as "Bob-cut Sengamalam" who has a huge fan club just for her hair style. You can see her at Sri Rajagopalaswamy Temple, Mannargudi, Tamilnadu.
Pics from Internet. pic.twitter.com/KINN8FHOV3— Sudha Ramen 🇮🇳 (@SudhaRamenIFS) July 5, 2020
ಒಮ್ಮೆ ಇಂಟರ್‌ನೆಟ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಬಾಬ್ ಕಟ್ ಇರುವ ಆನೆಯನ್ನು ನೋಡಿದೆ. ಆ ನಂತರ ಸೆಂಗಮಲ್ ಕೂಡ ಕೂದಲು ಬೆಳೆಸಿದರು. ಅಂದಿನಿಂದ ಸೇಂಗಮಲ್‌ಗೂ ಬಾಬ್‌ಕಟ್ ಮಾಡುತ್ತಿದ್ದೇನೆ ಎಂದು ರಾಜಗೋಪಾ ಹೇಳಿದರು.