More

    ಗದಗನಲ್ಲಿ ಆತ್ಮಹತ್ಯೆಗೆ ಶರಣಾದ ಬಿಎಂಟಿಸಿ ಬಸ್ ಚಾಲಕ

    ಗದಗ: ಬೆಂಗಳೂರಿನ ಬಿಎಂಟಿಸಿಯಲ್ಲಿ ಚಾಲಕ/ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ನಿವಾಸಿ ಅಲ್ಲಾಸಾಬ್ ತಾಳಕೇರಿ (40) ಎನ್ನುವವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಲ್ಲಾಸಾಬ್ ತಾಳಕೇರಿ ನಿಡಗುಂದಿ ಗ್ರಾಮದ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೆಂಗಳೂರಿನ ಉತ್ತರ ಹಳ್ಳಿಯ 33 ನೇ ಡಿಪೋದಲ್ಲಿ ಚಾಲಕ ಕಂ ಕಂಡಕ್ಟರ್ ಆಗಿ ಅಲ್ಲಾಸಾಬ್ ಕೆಲಸ ಮಾಡುತ್ತಿದ್ದರು. ಸಾರಿಗೆ ಮುಷ್ಕರದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಿಡಗುಂದಿ ಗ್ರಾಮಕ್ಕೆ ಬಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಕುರಿತು ನರೇಗಲ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

    ನಾಳೆ 19 ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್, 48 ಗಂಟೆ ಭಾರಿ ಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts