ಸ್ಯಾನಿಟೈಸರ್​ನ್ನು ಗಟಗಟನೆ ಕುಡಿದ ಅಧಿಕಾರಿ; ಅಯ್ಯಯ್ಯೋ ಹಾಗೆ ಮಾಡಬೇಡಿ ಎಂದ ಸಹೋದ್ಯೋಗಿಗಳು

sanitser
Published on

ಮುಂಬೈ: ಅಧಿಕಾರಿಯೊಬ್ಬರು ನೀರೆಂದು ತಿಳಿದು ಸ್ಯಾನಿಟೈಸರ್​ನ್ನೇ ಗಟಗಟನೆ ಕುಡಿದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಬಜೆಟ್​ ವೇಳೆಯಲ್ಲಿ ಅಧಿಕಾರಿ ಸ್ಯಾನಿಟೈಸರ್​ ಕುಡಿದಿರುವ ವಿಡಿಯೋ ವೈರಲ್​ ಆಗಿದೆ.

ಬುಧವಾರದಂದು ಬಿಎಂಸಿ ಬಜೆಟ್​ ಮಂಡನೆ ನಡೆಯುತ್ತಿತ್ತು. ಉಪ ಆಯುಕ್ತ ರಮೇಶ್​ ಪವಾರ್​ಸ, ಬಜೆಟ್​ ಮಂಡನೆಗೆ ಮೊದಲು ನೀರು ಕುಡಿಯಲು ಮುಂದಾಗಿದ್ದಾರೆ. ಟೇಬಲ್​ ಮೇಲೆ ನೀರಿನ ಬಾಟೆಲ್​ ಮತ್ತು ಸ್ಯಾನಿಟೈಸರ್​ ಬಾಟೆಲ್​ ಎರಡನ್ನೂ ಒಟ್ಟಿಗೆ ಇಟ್ಟಲಾಗಿತ್ತು. ಬಜೆಟ್​ನ ತರಾತುರಿಯಲ್ಲಿದ್ದ ಅವರು ನೀರಿನ ಬಾಟೆಲ್​ ಬದಲು ಸ್ಯಾನಿಟೈಸರ್​ ಬಾಟೆಲ್​ ಮುಚ್ಚಳ ತೆರೆದು ಕುಡಿದಿದ್ದಾರೆ. ಒಂದು ಸಿಪ್​ ಸ್ಯಾನಿಟೈಸರ್​ ಬಾಯಿಯೊಳಗೆ ಹೋಗುತ್ತಿದ್ದಂತೆ ತಾನು ಮಾಡಿದ ತಪ್ಪಿನ ಅರಿವು ಅವರಿಗಾಗಿದೆ. ಅವರ ಅಕ್ಕ ಪಕ್ಕದವರೂ ಒಮ್ಮೆಲೆ ಗಾಬರಿಯಾಗಿದ್ದು, ಅಯ್ಯಯ್ಯೋ ಅದಲ್ಲ ಸರ್​, ಇದನ್ನ ಕುಡಿಯಿರಿ ಎಂದು ನೀರಿನ ಬಾಟೆಲ್​ ಕೊಟ್ಟಿದ್ದಾರೆ.

ನೀರು ಮತ್ತು ಸ್ಯಾನಿಟೈಸರ್​ ಬಾಟೆಲ್​ ಬಹುತೇಕ ಒಂದೇ ತರ ಇತ್ತು. ಅದರಿಂದಾಗಿ ಈ ಸಮಸ್ಯೆಯಾಗಿದೆಯೆಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ನಡೆದ ಬೆನ್ನೆಲ್ಲೇ ಟೇಬಲ್​ ಮೇಲಿದ್ದ ಸ್ಯಾನಿಟೈಸರ್​ ಬಾಟೆಲ್​ನ್ನು ತೆಗೆದಿಟ್ಟಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net