ಮರವಂತೆಯಲ್ಲಿ ರಕ್ತದಾನ ಶಿಬಿರ

kota
Published on

ಕೋಟ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮರವಂತೆ ರಕ್ತದಾನಿ ಬಳಗ, ಉಡುಪಿ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್, ಕುಂದಾಪುರ ರೆಡ್‌ಕ್ರಾಸ್ ಸಹಕಾರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಇತ್ತೀಚೆಗೆ ನಡೆಯಿತು.

ಅಭಯಹಸ್ತ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಹಲವು ವರ್ಷಗಳಿಂದ ರಕ್ತದಾನ ಮಾಡುತ್ತಿರುವ ಅಭಯಹಸ್ತ ಚಾರಿಟೆಬಲ್ ಟ್ರಸ್ಟ್‌ನ ಸದಸ್ಯರಾದ ಪ್ರಶಾಂತ್ ತಲ್ಲೂರು ಹಾಗೂ ದಿನೇಶ್ ಕಾಂಚನ್ ಬಾರಿಕೆರೆ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು 86 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net