

ಕುಂದಾಪುರ: ಸ್ವಾತಂತ್ರ್ಯೋತ್ಸವ ಅಂಗವಾಗಿ ರೋಯಲ್ ಕ್ಲಬ್ ಕುಂದಾಪುರ ನೇತತ್ವದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ ಕುಂದಾಪುರ, ಜೇಸಿಐ ಕುಂದಾಪುರ, ವಾರ್ಕೆಟ್ ಬಾಯ್ಸ ಕುಂದಾಪುರ ಸಹಯೋಗದೊಂದಿಗೆ 29ನೇ ವರ್ಷದ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.
ರೋಯಲ್ ಕ್ಲಬ್ ಅಧ್ಯಕ್ಷ ಪ್ರಮೋದ್ ಕುವಾರ್, ಕಾರ್ಯದರ್ಶಿ ಪ್ರಶಾಂತ ಮೊಗವೀರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪದಾಧಿಕಾರಿಗಳು, ಅಧಿಕಾರಿಗಳು ಹಾಗೂ ಜೇಸಿ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
25ಕ್ಕೂ ಅಧಿಕ ಬಾರಿ ರಕ್ತದಾನ ವಾಡಿದ ಜಗದೀಶ್, ಕೆ. ಶ್ರೀನಿವಾಸ ರಾವ್, ರಮೇಶ್ ಹೋಬಳಿದಾರ್, ಪ್ರಕಾಶ್ ಎನ್., ಶಂಕರ್ ಕಂಚುಗಾರ್, ಪ್ರಕಾಶ್ ಕೆ., ಚಂದ್ರ ವಿ., ರತ್ನಾಕರ ಮಕ್ಕಿಮನೆ, ಸಂತೋಷ್ ವಾಣಿಮನೆ ಅವರನ್ನು ಗೌರವಿಸಲಾಯಿತು.