

ಕುಂದಾಪುರ: ಜಿಲ್ಲಾ ಮೊಗವೀರ ಯುವ ಸಂಘಟನೆ ಮತ್ತು ಹೆಮ್ಮಾಡಿ ಘಟಕ, ಅಂಬಲಪಾಡಿಯ ಜಿ.ಶಂಕರ ಫ್ಯಾಮಿಲಿ ಟ್ರಸ್ಟ್ ನೇತೃತ್ವದಲ್ಲಿ ಕೆಎಂಸಿ ರಕ್ತನಿಧಿ ವಿಭಾಗ ಮಣಿಪಾಲ ಹಾಗೂ ಉಡುಪಿ ಜಿಲ್ಲಾಡಳಿತ ಸಹಯೋಗದೊಂದಿಗೆ ಭಾನುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ, ಬಗ್ವಾಡಿ ಹೋಬಳಿ ಮೊಗವೀರ ಸ್ತ್ರೀಶಕ್ತಿ, ಇತರ ಸಹಕಾರಿ ಸಂಘಗಳ ನೌಕರರ ಒಕ್ಕೂಟ ಕುಂದಾಪುರ, ಲಯನ್ಸ್ ಕ್ಲಬ್ ನಾವುಂದ, ಮಹಾವಿಷ್ಣು ಯುವಕ ಮಂಡಲ ಮತ್ತು ಮಾನಸ ಯುವತಿ ಮಂಡಲ ಹರೆಗೋಡು ಸಹಕರಿಸಿದವು.