ವಿಜಯವಾಣಿ ಸುದ್ದಿಜಾಲ ಬೈಂದೂರು
ಒಂದು ಯುನಿಟ್ ರಕ್ತದಿಂದ ಮೂರು ಜೀವಗಳ ರಕ್ಷಣೆ ಸಾಧ್ಯ. ನಿಯಮಿತ ರಕ್ತದಾನದಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಎಂಸಿ ರಕ್ತನಿಧಿ ವಿಭಾಗದ ವೈದ್ಯ ಡಾ.ಆಶಿಷ್ ಚೋಪ್ರಾ ಹೇಳಿದರು.
ಉಪ್ಪುಂದ ರೈತಸಿರಿ ಸಭಾಂಗಣದಲ್ಲಿ ಬೈಂದೂರು ರೋಟರಿ ಕ್ಲಬ್ ನೇತೃತ್ವದಲ್ಲಿ ಬಿಜೂರು ಶ್ರೀ ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘ, ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘ, ಶ್ರೀ ರಾಮಕ್ಷತ್ರಿಯ ಯುವಕ ಸಮಾಜ, ಆಸರೆ ಬಳಗ ಫಿಶರೀಸ್ ಕಾಲನಿ ಆಶ್ರಯದಲ್ಲಿ ಕೆಎಂಸಿ ರಕ್ತನಿಧಿ ವಿಭಾಗದ ಮೂಲಕ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಶಿಬಿರ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾರಾಯಣಗುರು ಕಲಾ ಮತ್ತು ಕ್ರೀಡಾ ಸಂಘ ಅಧ್ಯಕ್ಷ ಪರಮೇಶ್ವರ ಪೂಜಾರಿ, ತಾಲೂಕು ದೈವಜ್ಞ ಬ್ರಾಹ್ಮಣ ಸಂಘ ಉಪಾಧ್ಯಕ್ಷ ಅಶೋಕ್ ಶೇಟ್, ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಅಧ್ಯಕ್ಷ ಸುರೇಂದ್ರ ಡಿ. ಪಡುವರಿ, ಉಪ್ಪುಂದ ಆಸರೆ ಬಳಗ ಭುವನ್, ರೋಟರಿ ಸದಸ್ಯರಾದ ಐ.ನಾರಾಯಣ, ಮಂಜುನಾಥ ಮಹಾಲೆ, ಕೃಷ್ಣಮೂರ್ತಿ ಶೇಟ್ ಇದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಸುನೀಲ್ ಎಚ್.ಜಿ ನಿರೂಪಿಸಿದರು.