

ತ್ರಿಸ್ಸೂರ್ : ಕೇರಳದಲ್ಲಿ ತ್ರಿಸ್ಸೂರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ(ಎನ್ಡಿಎ) ಅಭ್ಯರ್ಥಿ ನಟ ಸುರೇಶ್ ಗೋಪಿ ಮುನ್ನಡೆ ಸಾಧಿಸುತ್ತಿದ್ದಾರೆ. ಮಲಯಾಳಂ ನಟನಾಗಿ, ಟಿವಿ ಆ್ಯಂಖರ್ ಆಗಿ, ಗಾಯಕನಾಗಿ ಗೋಪಿ ಅವರಿಗಿರುವ ಜನಪ್ರಿಯತೆಯನ್ನು ನಂಬಿ ಬಿಜೆಪಿ ಗೆಲ್ಲುವ ಹಿರಿದಾಸೆ ಹೊಂದಿದೆ.
ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಕರುಣಾಕರನ್ ಅವರ ಮಗಳಾದ ಪದ್ಮಜ ವೇಣುಗೋಪಾಲ್ ಸ್ಪರ್ಧಿಸುತ್ತಿದ್ದು, ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್ಡಿಎಫ್)ನಿಂದ ಪಿ.ಬಾಲಚಂದ್ರನ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮೂವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ತ್ರಿಸ್ಸೂರ್ ತಮ್ಮ ತಂದೆ ಕರುಣಾಕರನ್ ಅವರ ವಿಶ್ವಾಸಾರ್ಹ ಕ್ಷೇತ್ರವಾಗಿರುವುದನ್ನು ಪದ್ಮಜ ವೇಣುಗೋಪಾಲ್ ನಂಬಿಕೊಂಡಿದ್ದಾರೆ. (ಏಜೆನ್ಸೀಸ್)