ಪ್ರತಿ ಗ್ರಾಮಗಳಲ್ಲಿ ಬಿಜೆಪಿ ಅನಿವಾರ್ಯ : ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಭಿಮತ

New Project
Published on

ಮಂಜೇಶ್ವರ: ಮೋದಿ ಆಡಳಿತದಲ್ಲಿ ದೇಶದ ಪ್ರಗತಿ ಇಂದು ಲೋಕಕ್ಕೆ ಮಾದರಿ. ಕೇರಳದಲ್ಲಿಯೂ ಇಂದು ಬಿಜೆಪಿ ಪ್ರಬಲ ಶಕ್ತಿ, ಗ್ರಾಮ ಗ್ರಾಮಗಳಲ್ಲಿ ಬಿಜೆಪಿ ಜನ ಸಾಮಾನ್ಯರಿಗೆ ಅನಿವಾರ್ಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಹೇಳಿದರು.

ಮೀಂಜ ಪಂಚಾಯಿತಿ ಮಟ್ಟದ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಮೀಯಪದವುನಲ್ಲಿ ಉದ್ಘಾಟಿಸಿ ಮಾತನಾಡಿದರು.

ಚಂದ್ರಹಾಸ ಶೆಟ್ಟಿ ಬೇಜ್ಜ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ವಿ.ಭಟ್, ಯತೀರಾಜ್ ಶೆಟ್ಟಿ, ಶಾಲಿನಿ ಶೆಟ್ಟಿ, ಆಶಾಲತಾ ಬಿ.ಎಂ., ಎ.ಕೆ.ಕಯ್ಯಾರ್, ಶೇಖರ ಕೊಡಿ, ಗಣೇಶ್ ಭಟ್ ವಾರಾಣಸಿ, ನಾರಾಯಣ ತುಂಗ, ಜಯರಾಮ್ ಕುಳೂರು, ಗಂಗಾಧರ್ ದಡ್ಡಂಗಡಿ ಸಹಕರಿಸಿದರು. ನಾರಾಯಣ ನಾಯ್ಕ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಹರೀಶ್ ನಾರಂಪಾಡಿ ಕಾರ್ಯಾಗಾರ ನಿರ್ವಹಿಸಿದರು. ಮಂಜುನಾಥ್ ಭಂಡಾರಿ ವಂದಿಸಿದರು.

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net