More

    ಕೃಷಿ ಕಾಯ್ದೆಯ ಅಪನಂಬಿಕೆಗಳನ್ನು ತೆಗೆದುಹಾಕಲು ಮುಂದಾದ ಬಿಜೆಪಿ! ದೇಶಾದ್ಯಂತ 700 ಸುದ್ದಿಗೋಷ್ಠಿ

    ನವದೆಹಲಿ: ಕೃಷಿ ಕಾಯ್ದೆಗಳ ಬಗ್ಗೆ ದೇಶಾದ್ಯಂತ ರೈತ5ರ ಹೋರಾಟ ಮುಗಿಲು ಮುಟ್ಟಿದೆ. ದೆಹಲಿಯಲ್ಲಿ ಹೋರಾಟ ಆರಂಭವಾಗಿ 15 ದಿನಗಳ ನಂತರ ಇದೀಗ ಹೋರಾಟಕ್ಕೆ ಕೆಲವು ಬೇರೆಯದ್ದೇ ತಿರುವುಗಳು ಸಿಗಲಾರಂಭಿಸಿವೆ. ಕೃಷಿ ಕಾಯ್ದೆಯ ಬಗ್ಗೆ ಜನರಿಗಿರುವ ಅಪನಂಬಿಕೆಗಳನ್ನು ತೆಗೆದುಹಾಕಲು ಮುಂದಾಗಿರುವ ಬಿಜೆಪಿ ವಿಶೇಷ ಅಭಿಯಾನಕ್ಕೆ ಸಿದ್ಧವಾಗಿದೆ.

    ಇದನ್ನೂ ಓದಿ: ‘ನಾ ನಿಂಗೊಬ್ಬಳಿಗೇ ಸೇರಿದವನಲ್ಲ, 10 ಮಹಿಳೆಯರಿಗೆ ಸೇರಿದವನು’ ತಲಾಖ್​ ಹೇಳುವ ಮುನ್ನ ಶಾಕ್ ಕೊಟ್ಟ ಗಂಡ

    ದೇಶಾದ್ಯಂತ 700 ಸ್ಥಳಗಳಲ್ಲಿ ಜಿಲ್ಲಾ ಮಟ್ಟದ ಸುದ್ದಿಗೋಷ್ಠಿ ನಡೆಸಲಾಗುವುದು. ಜನರಿಗೆ ಮತ್ತು ರೈತರಿಗೆ ಕೃಷಿ ಕಾಯ್ದೆಯ ಬಗ್ಗೆ ಇರುವ ಅಪನಂಬಿಕೆಗಳನ್ನು ತೆಗೆದುಹಾಕಲಾಗುವುದು ಎಂದು ಬಿಜೆಪಿ ತಿಳಿಸಿದೆ. ಇದರ ಜತೆಗೆ ಹಳ್ಳಿಗಳಲ್ಲಿ 700 ಪಂಚಾಯತಿ ಕಟ್ಟೆ ನಡೆಸಿ ಕೃಷಿ ಕಾಯ್ದೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

    ಇದನ್ನೂ ಓದಿ: ‘ದಿವ್ಯಾ ನನ್ನ ಜತೆ ಎಷ್ಟು ಖುಷಿಯಾಗಿದ್ಲು ಗೊತ್ತಾ?’ ಮೃತ ನಟಿಯ ಬಗ್ಗೆ ಗಂಡ ಹೇಳಿದ್ದೇನು?

    ದೆಹಲಿಯಲ್ಲಿ ಕಳೆದ ಎರಡು ವಾರಗಳಿಂದ ರೈತ ಹೋರಾಟ ನಡೆಯುತ್ತಿದೆ. ರೈತ ಹೋರಾಟದಲ್ಲಿರುವ ಭಾರತೀಯ ಕಿಸಾನ್​ ಯೂನಿಯನ್ ಏಕ್ತಾ ಸಂಘಟನೆಯವರು ಅನ್​ಲಾಫುಲ್​ ಆ್ಯಕ್ಟಿವಿಟೀಸ್ ಪ್ರಿವೆನ್ಶನ್ ಆ್ಯಕ್ಟ್ ಪ್ರಕಾರ ಬಂಧನಕ್ಕೆ ಒಳಗಾಗಿರುವ ಉಮರ್ ಖಾಲಿದ್​, ಶಾರ್ಜೀಲ್ ಇಮಾಮ್​, ವರವರ ರಾವ್, ಸುಧಾ ಭಾರದ್ವಾಜ್ ಮತ್ತು ಇತರರ ಬಿಡುಗಡೆಗೆ ಆಗ್ರಹಸಿದೆ. ಆದರೆ ಹೋರಾಟವನ್ನು ನಕ್ಸಲರು ಹೈಜ್ಯಾಕ್​ ಮಾಡಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts