More

  ಒಳಪಂಗಡಗಳನ್ನು ಮೀರಿ ಒಂದಾಗಬೇಕು; ವೀರಶೈವ ಲಿಂಗಾಯತರಿಗೆ ಬಿ.ವೈ.ವಿಜಯೇಂದ್ರ ಸಲಹೆ

  ಬೆಂಗಳೂರು: ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳು ಒಂದಾಗಿ ಸಮಾಜ ಮತ್ತು ಧರ್ಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

  ಶರಣ ಸೇವಾ ಸಮಿತಿ ಭಾನುವಾರ ಸಂಜಯನಗರದ ಶ್ರೀರಮಣ ಮಹರ್ಷಿ ಹೆರಿಟೇಜ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯರ ಯುಗಮಾನೋತ್ಸವ, ಜಗಜ್ಯೋತಿ ಬಸವೇಶ್ವರರ ಜಯಂತಿ ಮತ್ತು ಡಾ.ಶಿವಕುಮಾರ ಸ್ವಾಮಿಗಳ 116ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

  ವೀರಶೈವ ಲಿಂಗಾಯತ ಸಮಾಜವು ನಾಡಿನ ಪ್ರಬಲ ಸಮುದಾಯವಾಗಿದ್ದು, ಈ ಸಮಾಜದಲ್ಲಿ ಅನೇಕ ಒಳಪಂಗಡಗಳಿರುವುದರಿಂದ ಒಂದೇ ವೇದಿಕೆಯಲ್ಲಿ ಸಮುದಾಯವನ್ನು ಸಂಘಟಿಸುವ ಅಗತ್ಯವಿದೆ. ಇದರಿಂದ ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಸಮಾಜಕ್ಕೆ ಶಕ್ತಿ ಬರುತ್ತದೆ ಎಂದು ಅವರು ಹೇಳಿದರು.

  ಸಮಾರಂಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ವೈ..ನಾರಾಯಣಸ್ವಾಮಿ ನಿವೃತ್ತ ಐಎಎಸ್ ಅಧಿಕಾರಿ ಮಲ್ಲಿಕಾರ್ಜುನ ದ್ಯಾಬೇರಿ, ಮಾಜಿ ಉಪ ಲೋಕಾಯುಕ್ತ ಸುಭಾಷ್ ಆಡಿ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಎಂ.ಡಿ. ಅಮರೇಗೌಡ ಮಾಲಿ ಪಾಟೀಲ್, ಅಭಾವೀಮ ಮುಖಂಡ ಮಹಾಂತೇಶ್ ಪಾಟೀಲ್ ಸಮಿತಿಯ ಅಧ್ಯಕ್ಷ ಎಸ್.ಆರ್. ಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪಾಟೀಲ್, ಮತ್ತಿತರರು ಉಪಸ್ಥಿತರಿದ್ದರು.

  ಕಾರ್ಯಕ್ರಮದ ಅಂಗವಾಗಿ ನಾಗಶೆಟ್ಟಿಹಳ್ಳಿ ನ್ಯೂ ಬಿಇಎಲ್ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಬಸವೇಶ್ವರ ಪುತ್ತಳಿಗೆ ಶರಣ ಸೇವಾ ಸಮಿತಿಯ ವತಿಯಿಂದ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಸಂಜೆ ಗೆದ್ದಲಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ರಮಣಮಹರ್ಷಿ ಹೆರಿಟೇಜ್ ಸೆಂಟರ್‌ವರೆಗೆ ಶ್ರೀಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ ಮತ್ತು ಡಾ.ಶಿವಕುಮಾರ ಸ್ವಾಮಿಗಳ ಭಾವಚಿತ್ರದ ಮೆರವಣಿಗೆಯನ್ನು ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡಿದ್ದರು.

  See also  ನ್ಯಾಯಾಂಗ ಬಂಧನಕ್ಕೆ ಪ್ರಜ್ವಲ್

  ಸಮಾರಂಭದಲ್ಲಿ ಕಲ್ಯಾಣ್ ಮತ್ತವರ ಸಂಗಡಿಗರಿಂದ ವಚನ ಗಾಯನ ನಡೆಯಿತು. ಅಕ್ಕನ ಬಳಗದ ತಾಯಂದಿರು ಪ್ರಾರ್ಥನೆ ಮಾಡಿದರು.

  ಒಳಪಂಗಡಗಳನ್ನು ಮೀರಿ ಒಂದಾಗಬೇಕು; ವೀರಶೈವ ಲಿಂಗಾಯತರಿಗೆ ಬಿ.ವೈ.ವಿಜಯೇಂದ್ರ ಸಲಹೆ

  ಒಂದೇ ವೇದಿಕೆಯಲ್ಲಿ ಮಹಾತ್ಮರ ಸ್ಮರಣೆ

  ಧರ್ಮದ ಸ್ಥಾಪಕರು, ಕ್ರಾಂತಿಕಾರಿ ಸುಧಾರಕರು ಮತ್ತು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳ ಸ್ಮರಣೆಯನ್ನು ಒಂದೇ ವೇದಿಕೆಯಲ್ಲಿ ಮಾಡಿದ್ದು ಸ್ವಾಗತಾರ್ಹ ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಧಾರವಾಡದ ಉಪ್ಪಿನಬೆಟಗೇರಿ ಮೂರುಸಾವಿರ ಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮಿಗಳು ತಿಳಿಸಿದರು.

  ಶ್ರೀಜಗದ್ಗುರು ರೇಣುಕಾಚಾರ್ಯರು, ಶ್ರೀ ಬಸವೇಶ್ವರರು, ಶ್ರೀಶಿವಕುಮಾರ ಸ್ವಾಮಿಗಳ ಕೊಡುಗೆ ಈ ಧರ್ಮಕ್ಕೆ ಅಪಾರವಾಗಿದ್ದು, ಆ ಮೂವರು ಧರ್ಮಪುರುಷರನ್ನ ಒಂದೇ ವೇದಿಕೆಯಲ್ಲಿ ಸ್ಮರಣೆ ಮಾಡಿದ ಮಾದರಿ ಕಾರ್ಯಕ್ರಮ ಇದಾಗಿದೆ ಎಂದು ಅವರು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts