

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 70ನೇ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲೆಂದು ಬಿಜೆಪಿ ರಾಜ್ಯ ಸಮಿತಿ ವೇದಿಕೆ ಸಜ್ಜುಗೊಳಿಸಿದ್ದು, ಸೆ.14-20ರ ವರೆಗೆ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 70 ಅಂಗವಿಕಲರಿಗೆ ಕೃತಕ ಸಾಧನಗಳ ವಿತರಣೆ, ನಗರ-ಪಟ್ಟಣಗಳ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿ ಜಿಲ್ಲೆಯ ತಲಾ 70 ಬಡ ಪುರುಷ ಮತ್ತು ಮಹಿಳೆಯರಿಗೆ ಕನ್ನಡಕ ವಿತರಿಸಲಾಗುತ್ತದೆ. ವೃಕ್ಷಾಪರೋಹಣ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಗಳು ನಡೆಯಲಿವೆ. 70 ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು-ಬ್ರೆಡ್ ಹಂಚಿಕೆ, 70 ಜನರಿಂದ ಪ್ಲಾಸ್ಮಾ ದಾನ, ಯುವ ಮೋರ್ಚಾದಿಂದ ಪ್ರತಿ ಜಿಲ್ಲೆಗೆ 2ರಂತೆ 70 ಸ್ಥಳಗಳಲ್ಲಿ ರಕ್ತದಾನ ಉಚಿತ ಶಿಬಿರ. ಅಲ್ಲದೆ, ಪ್ರತಿ ಜಿಲ್ಲೆಯ 70 ಹಳ್ಳಿಗಳನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಜನ ಜಾಗೃತಿ ಅಭಿಯಾನ ಏರ್ಪಡಿಸಲಾಗಿದೆ. ದೇಶದ 70 ಸ್ಥಳಗಳಲ್ಲಿ ನಡೆಯಲಿರುವ ವರ್ಚುವಲ್ ರ್ಯಾಲಿಗಳ ಪೈಕಿ ರಾಜ್ಯದ ಪಾಲಿಗೆ 2 ಲಭಿಸಿದೆ.
ಸೇವಾಸಪ್ತಾಹ ಹಾಗೂ ‘ಆತ್ಮ ನಿರ್ಭರ್ ಭಾರತ’ ಸಂಕಲ್ಪ ರ‍್ಯಾಲಿ ಒಳಗೊಂಡಂತೆ ಸೆ.25ರಿಂದ ಅ.2ರವರೆಗೆ ಬಿಡುವಿಲ್ಲದ ಚಟುವಟಿಕೆಗಳನ್ನು ರೂಪಿಸಲಾಗಿದೆ. | ಮಹೇಶ್ ಟೆಂಗಿನಕಾಯಿ,ಪ್ರ.ಕಾರ್ಯದರ್ಶಿ, ರಾಜ್ಯ ಬಿಜೆಪಿ