ಬಿಜೆಪಿ ಯೋಜನೆ, ಶಾಸಕರಿಗೆ ಕ್ರೆಡಿಟ್ - ಮಾಜಿ ಎಂಎಲ್‌ಎ ಸಂಜೀವ ಮಠಂದೂರು ಹೇಳಿಕೆ - ಮೆಡಿಕಲ್ ಕಾಲೇಜು ವಿರೋಽಸಿಲ್ಲ

PTR_19 MAR_3
Published on

ಪುತ್ತೂರು: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪ್ರಸ್ತಾವನೆಗೆ ಕಳೆದ ಬಿಜೆಪಿ ಸರ್ಕಾರದ ಅವಽಯಲ್ಲೇ ಅನುಮೋದನೆ ಸಿಕ್ಕಿದ್ದರೂ, ಶಾಸಕ ಅಶೋಕ್ ಕುಮಾರ್ ರೈ ಈ ಯೋಜನೆ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಿರುವುದು ನಾಚಿಕೆಕೇಡಿನ ವಿಚಾರ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ೭೮೦ ಕೋಟಿ ರೂ. ಮೊತ್ತದ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ೨೦೨೩ ಮಾರ್ಚ್ ೧೫ಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿತ್ತು. ಕಡಬ ಭಾಗಕ್ಕೆ ೨೩೦ ಕೋಟಿ ಯೋಜನೆ ೨೦೨೩ ಡಿಸೆಂಬರ್ ನಲ್ಲಿ ಟೆಂಡರ್ ಆಗಿದ್ದು, ಅದೆಲ್ಲವೂ ಪುತ್ತೂರು ಕ್ಷೇತ್ರದ ಯೋಜನೆ ಎಂಬಂತೆ ಬಿಂಬಿಸುತ್ತಿರುವುದು ಖಂಡನೀಯ. ಒಂದು ವೇಳೆ ಅಶೋಕ್ ರೈ ತಾವೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಮಂಜೂರು ಮಾಡಿದ್ದರೆ ಅದರ ಶಂಕುಸ್ಥಾಪನೆ ಸಮಾರಂಭ ಯಾಕೆ ಮಾಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ನೀಡಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ಸಂಗತಿ. ಇದಕ್ಕಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯನ್ನು ಈ ವರ್ಷ ಮೇಲ್ದರ್ಜೆಗೆ ಏರಿಸುವುದಾಗಿ ಹೇಳಿರುವುದು ಕೂಡ ಸ್ವಾಗತಾರ್ಹ ಸಂಗತಿ. ಇವೆರಡನ್ನೂ ನಾನು ಸ್ವಾಗತಿಸುತ್ತೇನೆ. ಆದರೆ ಎಷ್ಟು ಹಾಸಿಗೆಯ ಆಸ್ಪತ್ರೆಯಾಗಿ ಮಾಡಲಾಗುವುದು ಎಂಬ ಉಲ್ಲೇಖವಿಲ್ಲ. ಮೆಡಿಕಲ್ ಕಾಲೇಜು ಯಾವಾಗ ಮಾಡಲಾಗುವುದು ಎಂಬುದೂ ಇಲ್ಲ. ೩೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಗೊಂಡ ಮೇಲಷ್ಟೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬಂದು ಪರಿಶೀಲಿಸಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶಿಫಾರಸು ಮಾಡುತ್ತಾರೆ. ಅಲ್ಲಿಯವರೆಗೆ ಮೆಡಿಕಲ್ ಕಾಲೇಜು ಮಂಜೂರಾಗಲು ಸಾಧ್ಯವಿಲ್ಲ ಎಂದರು.

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಉಪಸ್ಥಿತರಿದ್ದರು.

ಉದ್ಯೋಗ ಸೃಷ್ಟಿಸುವ ಯತ್ನ

ಮೆಡಿಕಲ್ ಕಾಲೇಜಿಗೆಂದು ಶಕುಂತಳಾ ಶೆಟ್ಟಿ ಕಾಯ್ದಿರಿಸಿದ ೪೦ ಎಕರೆ ಜಾಗವನ್ನು ಸಂಜೀವ ಮಠಂದೂರು ಮೀನು ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದರು ಎಂಬ ಶಾಸಕ ಅಶೋಕ್ ಕುಮಾರ್ ರೈ ಆರೋಪಕ್ಕೆ ಉತ್ತರಿಸಿ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಜಿಲ್ಲೆಗೆ ಸೀಫುಡ್ ಪಾರ್ಕ್ ಮಂಜೂರಾಗಿತ್ತು. ಸಾವಿರಾರು ಉದ್ಯೋಗ ಸೃಷ್ಟಿಸಲಿರುವ ಹಿನ್ನೆಲೆಯಲ್ಲಿ ಅದನ್ನು ಸೇಡಿಯಾಪು ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಜನ ವಿರೋಧ ಕಂಡು ನಿಲ್ಲಿಸಿದೆ. ಸೀ ಫುಡ್ ಪಾರ್ಕ್ ತಕ್ಷಣವೇ ಮಂಜೂರಾದ ಕಾರಣ ತುರ್ತಾಗಿ ಆ ಜಾಗ ನೀಡಲು ಮುಂದಾದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net