ಪುತ್ತೂರು: ಜಿಲ್ಲೆಯಲ್ಲಿ ಎರಡು ತಿಂಗಳಿಂದ ಪ್ರಾಕೃತಿಕವಾಗಿ ಸಿಗುವ ಮರಳು, ಕೆಂಪುಕಲ್ಲು ಅಭಾವದಿಂದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆಗೆ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜುಲೈ ೧೪ರಂದು ಬೆಳಗ್ಗೆ ಪುತ್ತೂರಿನ ಅಮರ್ ಜವಾನ್ ಸ್ಮಾರಕದ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.
ಮರಳು, ಕಲ್ಲಿನ ಅಭಾವದಿಂದ ಕಟ್ಟಡ ಕಾರ್ಮಿಕರು, ಕಲ್ಲು ಕ್ವಾರಿ ಕಾರ್ಮಿಕರು, ಮರಳು ತೆಗೆಯುವ ಕಾರ್ಮಿಕರು, ಸಣ್ಣ ಸಣ್ಣ ಗುತ್ತಿಗೆದಾರರು, ಟೆಂಪೋ, ಲಾರಿ, ಜೆಸಿಬಿ ಚಾಲಕ ವರ್ಗ ಹಾಗೂ ಹಳ್ಳಿಯಲ್ಲಿ ಮನೆ ನಿರ್ಮಾಣ ಮಾಡುವ ಬಡವರ್ಗ ಇವತ್ತು ಒಪ್ಪತ್ತಿನ ಊಟಕ್ಕೆ ಸಮಸ್ಯೆಯಾಗಿ ಕುಟುಂಬ ಬೀದಿಪಾಲಾಗುವ ಮಟ್ಟಕ್ಕೆ ತಲುಪಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ನಗರ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲು ಉಪಸ್ಥಿತರಿದ್ದರು.