'ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್​ ಮುಗಿಸುವ ಹುನ್ನಾರವಿದೆ, ಇನ್ನಾದ್ರೂ ದುರಹಂಕಾರದ ಮಾತನ್ನು ನಿಲ್ಲಿಸಿ'

VISHWANATHA
H VISHWANATH
Published on

ಮೈಸೂರು: ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್​ ಮುಗಿಸುವ ಹುನ್ನಾರವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಎಚ್​. ವಿಶ್ವನಾಥ್​ ಹರಿಹಾಯ್ದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದರು.

ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಸಿದ್ದರಾಮಯ್ಯ ಹೇಳಿಕೆ ಕೊಡವರಿಗೆ ಮಾಡಿದ ಅವಮಾನ. ನಿಮ್ಮ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ. ಒಂದು ಕಡೆ ಬಲಗೈ ದಲಿತರು ಮತಹಾಕಿಲ್ಲ ಎಂಬ ಹೇಳಿಕೆಯಿಂದ ಅವರ ಮತಬ್ಯಾಂಕ್ ಹಾಳಾಗಿದೆ ಎಂದರು.

ನಾನಿದ್ರೆ ಮಾತ್ರ ಕಾಂಗ್ರೆಸ್ ಅಂತ ಸಿದ್ದರಾಮಯ್ಯ ಅಂದುಕೊಂಡಿರಬಹುದು. ನಾನು ಸಿಎಂ ಆದ ಮೇಲೆ ಬೇರೆ ಯಾರು ಸಿಎಂ ಆಗಬಾರದು ಅನ್ನೋ ಮನೋಭಾವಿದೆ. ಇದನ್ನು ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕೆಂದು ಸಲಹೆ ನೀಡಿದರು.

140 ಸ್ಥಾನ ಗೆಲ್ಲುವ ಕಾಂಗ್ರೆಸ್‌ನಲ್ಲಿ 20 ಸ್ಥಾನ ಗೆಲ್ಲುವುದಿಲ್ಲವೇ ಅನ್ನೋ ಚರ್ಚೆ ಆರಂಭವಾಗಿದೆ. ಎಲ್ಲಿಗೆ ಬಂದು ನಿಂತಿದೆ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯನವರೇ ಇನ್ನಾದರೂ ನಿಮ್ಮ ದುರಹಂಕಾರದ ಮಾತನ್ನು ನಿಲ್ಲಿಸಿ. ನಿಮ್ಮ ಹೇಳಿಕೆಗೆ ನೀವೆ ಕೊಡವರ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net