ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಮುಂದೆ

27hly1
Published on

ಹಳಿಯಾಳ: ತಾಲೂಕಿನ 11 ಸಹಕಾರಿ ಸಂಘಗಳ (ಸೊಸೈಟಿ) ಚುನಾವಣೆ ನಡೆಯುತ್ತಿದ್ದು, ಡಿ.28 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಪಕ್ಷಾತೀತವಾಗಿದ್ದರೂ ಚುನಾವಣೆಯಲ್ಲಿ ರಾಜಕೀಯ ನಂಟು ಇದ್ದೇ ಇರುತ್ತದೆ. ಕಾಂಗ್ರೆಸ್ ಈ ಬಾರಿ ತಟಸ್ಥ ನಿಲುವು ತಾಳಿದಂತೆ ತೋರುತ್ತಿದೆ.

ಇಲ್ಲಿನ ಪಿಎಲ್‌ಡಿ ಬ್ಯಾಂಕಿನಲ್ಲಿ 14 ಜನ ನಿರ್ದೇಶಕರಿದ್ದು ಭಾಗವತಿ ಮತಕ್ಷೇತ್ರಕ್ಕೆ ಅಭ್ಯರ್ಥಿ ನಾಮಪತ್ರ ಸಲ್ಲಿಸದೆ ಇರುವುದರಿಂದ ಈ ಸ್ಥಾನಕ್ಕೆ ಮುಂದಿನ 5 ವರ್ಷಗಳವರೆಗೆ ಯಾವುದೇ ಚುನಾವಣೆ ನಡೆಯದೆ ಖಾಲಿ ಆಗಿ ಉಳಿಯಲಿದೆ. ಇನ್ನುಳಿದ 13 ಸ್ಥಾನಗಳಿಗೆ ಡಿ.28 ರಂದು ಮತದಾನ ನಡೆಯಬೇಕಿತ್ತು. ಇದಕ್ಕೂ ಮುನ್ನ ಬಿಜೆಪಿ ಬೆಂಬಲಿತ 13 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದ್ದಾರೆ. ಹಳಿಯಾಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಸುಭಾಷ ಕೊರ್ವೇಕರ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ. ಆದರೆ, ಅಭ್ಯರ್ಥಿಗಳನ್ನು ನಿಲ್ಲಿಸಲು ಇವರಿಬ್ಬರು ಹಿಂದೇಟು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net