ಬಿಜೆಪಿ ಕುಟ್ರುಪ್ಪಾಡಿ ಮಹಾಶಕ್ತಿಕೇಂದ್ರ ಸಭೆ

Kdb_Bjp
Published on

ಕಡಬ: ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಬಿಜೆಪಿ ಸೇವಾ ಪಾಕದ ಪ್ರಯುಕ್ತ ಸುಳ್ಯ ಮಂಡಲದ ಕುಟ್ರುಪ್ಪಾಡಿ ಮಹಾಶಕ್ತಿಕೇಂದ್ರ ಪ್ರಮುಖರ ಸಭೆ ಕಾಣಿಯೂರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಸಭಾಂಗಣದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್​ ರೈ ಕೆಡೆಂಜಿ ಹಾಗೂ ಕುಟ್ರುಪಾಡಿ ಮಹಾಶಕ್ತಿಕೇಂದ್ರದ ಬಿಜೆಪಿ ಸದಸ್ಯತ್ವದ ಪ್ರಭಾರಿ ರಾಧಾಕೃಷ್ಣ ಬೂಡಿಯಾರ್​ ಮಾಹಿತಿ ನೀಡಿದರು.

ಪ್ರಮುಖರಾದ ಸುರೇಶ್​ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಸುಳ್ಯ ಮಂಡಲ ಕಾರ್ಯದರ್ಶಿ ಗಣೇಶ್​ ಕೆ.ಎಸ್​.ಉದನಡ್ಕ, ಮಹಿಳಾ ಮೋರ್ಚಾ ಅಧ್ಯೆ ಬಿ.ಕೆ.ಇಂದಿರಾ, ಎಸ್​.ಟಿ.ಮೋರ್ಚಾದ ಅಧ್ಯಕ್ಷ ಗಂಗಾಧರ, ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ಜಯಪ್ರಕಾಶ್​, ಮಂಡಲ ಸಮಿತಿಯ ಸದಸ್ಯರಾದ ತಾರಾನಾಥ್​, ಧನಂಜಯ ಕೇನಾಜೆ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net