More

    ನೇಹಾ ಹತ್ಯೆ ಪ್ರಕರಣ: ಈ ವಿಷಯದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕ ಹಕ್ಕಿಲ್ಲ

    ಬೀದರ್: ನೇಹಾ ಹಿರೇಮಠ ಹತ್ಯೆ ಪ್ರಕರಣದ ಬಗ್ಗೆ ಇಂದು ಬೀದರ್​ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೇಹಾ ಹತ್ಯೆಯನ್ನು ಈಗಾಗಲೇ ಖಂಡಿಸಿರುವೆ. ಈಗಲೂ ಸಹ ಖಂಡಿಸುತ್ತೇನೆ ಎಂದರು.

    ಇದನ್ನೂ ಓದಿ: ಅಮೇಥಿಯಲ್ಲಿ ಮತ್ತೆ ಸ್ಮೃತಿ-ರಾಹುಲ್ ಹಣಾಹಣಿ? ರಾಯ್ ಬರೇಲಿಯಿಂದ ಪ್ರಿಯಾಂಕಾ ಸ್ಪರ್ಧೆ!

    ಪ್ರಕರಣದ ತನಿಖೆಯನ್ನು ಈಗಾಗಲೇ ಸಿಐಡಿಗೆ ಕೊಟ್ಟಿದ್ದೇವೆ. ವಿಶೇಷ ನ್ಯಾಯಲಯ ಮಾಡಬೇಕು ಅಂತ ಕೂಡ ಹೇಳಿದ್ದೇನೆ. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು, ಘೋರ ಶಿಕ್ಷ ಕೊಡಲು ಪ್ರಯತ್ನ ಮಾಡಬೇಕೆಂದು ತಿಳಿಸಿದ್ದೇನೆ. ನೇಹಾ ತಂದೆ ಜತೆಗೂ ಮಾತನಾಡಿದ್ದು, ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ ಎಂದರು.

    ಬಿಜೆಪಿಯವರು ಒಂದಾದರೂ ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ? ನೇಹಾ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ, ಇದರ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವುದೇ ನೈತಿಕೆ ಹಕ್ಕು ಇಲ್ಲ, ನೇಹಾ ಹತ್ಯೆ ಪ್ರಕರಣದಲ್ಲಿ ರಾಜಕೀಯ ಮಾಡಬಾರದು. ಆಕೆಯ ಕೊಲೆ ದೊಡ್ಡ ಅನ್ಯಾಯ. ಇದನ್ನು ನಾನು ಖಂಡಿಸಿದ್ದೇನೆ. ಈ ಹತ್ಯೆಯನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರಿಗೆ ಘೋರವಾದ ಶಿಕ್ಷೆ ಕೊಡಲು ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡಲಿದೆ ಎಂದರು.

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts