ನಟಿಸಿದ್ದು ಎರಡೇ ಸಿನಿಮಾವಾದರೂ, ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿಯರ ಸಾಲಿನಲ್ಲಿ ಕಿಸ್ ಬೆಡಗಿ ಶ್ರೀಲೀಲಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ಅವರು, ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಸಂಭ್ರಮದಲ್ಲಿರುವ ಶ್ರೀಲೀಲಾಗೆ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದ ಶ್ರೀಲೀಲಾ, ಶ್ರೀಮುರಳಿ ಜತೆಗೆ ಭರಾಟೆ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದ್ದರು. ಇದೀಗ ಇನ್ನೂ ಹಲವು ಸಿನಿಮಾಗಳು ಅವರ ಬತ್ತಳಿಕೆಯಲ್ಲಿವೆ. ಅವರ ಗ್ಲಾಮ್ ಲುಕ್ನ ಒಂದಷ್ಟು ಫೋಟೋಗಳು ಇಲ್ಲಿವೆ. ಸ್ಲೈಡ್ಶೋಗಾಗಿ ಫೋಟೋಗಳ ಮೇಲೆ ಕ್ಲಿಕ್ಕಿಸಿ…
ಚಿತ್ರ ಕೃಪೆ: ಭುವನ್ ಫೋಟೋಗ್ರಫಿ