ಯೋಗ ಮಾಡಿ ಆರೋಗ್ಯ ಪಡೆದುಕೊಳ್ಳಿ, ರಾಯನಾಳದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ

IMG-20240108-WA0003.jpg
Published on

ಹುಬ್ಬಳ್ಳಿ: ಯೋಗ್ಯ ಮಾರ್ಗದರ್ಶಕರ ನಿರ್ದೇಶನದಲ್ಲಿ ಯೋಗ ಮಾಡಿ ಆರೋಗ್ಯ ಭಾಗ್ಯವನ್ನು ಪಡೆದುಕೊಳ್ಳುವದು ಇಂದಿನ ಅವಶ್ಯಕತೆಯಾಗಿದೆ ಎಂದು ರಾಯನಾಳ ವಿರಕ್ತಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿಯ ವಿದ್ಯಾನಗರ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾಸಂಘದವರು ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 68ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಉಚಿತ ಯೋಗ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಸೇವಾ ಸಂಘದವರು ಪ್ರತಿವರ್ಷ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವದು ಅತ್ಯಂತ ಹೆಮ್ಮೆ ಪಡುವ ವಿಷಯವಾಗಿದೆ. ಸರಿಯಾದ ಯೋಗಾಭ್ಯಾಸದ ಕ್ರಮ ಪಾಲನೆ ಮಾಡುವದರಿಂದ ಆರೋಗ್ಯ ನಮ್ಮದಾಗುತ್ತದೆ ಎಂದರು.

ಶಿಬಿರ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಯೋಗಗುರು ಡಾ. ಪಂಚಲಿಂಗಪ್ಪ ಕವಲೂರ ಅವರು ಯೋಗದ ಮಹತ್ವ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಮಾತನಾಡಿ, ರಂಭಾಪುರಿ ಜಗದ್ಗುರುಗಳ ಜನ್ಮದಿನದಂದು ಪ್ರತಿವರ್ಷ ಯೋಗಾಸನ ಶಿಬಿರವನ್ನು ಮಾಡುತ್ತ ಬಂದಿದ್ದೇವೆ ಎಂದರು.

ವಿ.ಜಿ. ಪಾಟೀಲ, ರವಿ ಬೆಣಚಿನಮರಡಿ, ಶಿವಾನಂದ ಬೆಂಗೇರಿ, ಬಸವರಾಜ ಕೆಂಧೂಳಿ, ಪೂಜಾ ಹಿರೇಗೌಡರ, ಶಿಬಿರಾಥಿರ್ಗಳು ಉಪಸ್ಥಿತರಿದ್ದರು.

ಸಮುದಾಯ ಭವನದ ವ್ಯವಸ್ಥಾಪಕ ಗದಿಗೆಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರಾಮು ಮೂಲಗಿ ಪ್ರಾಥಿರ್ಸಿದರು. ಎಸ್.ಸಿ. ಕಮ್ಮಾರ ಸ್ವಾಗತಿಸಿದರು. ಡಾ. ಎಸ್.ವಿ. ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net