More

  ಪಕ್ಷಿ ಸಂರಕ್ಷಣೆಗೆ ಜನಾಸಕ್ತಿ ಅಗತ್ಯ


  ದಾಂಡೇಲಿ: ಹಾರ್ನ್​ಬಿಲ್ ಪಕ್ಷಿ ದಾಂಡೇಲಿ-ಜೊಯಿಡಾ ಭಾಗದಲ್ಲಿ ಹೆಚ್ಚಾಗಿರುವುದರಿಂದ ಈ ಭಾಗದ ಮಹತ್ವ ದೇಶ-ವಿದೇಶದಲ್ಲಿ ಹೆಚ್ಚಾಗಿದೆ. ಹಾರ್ನ್​ಬಿಲ್ ಪಕ್ಷಿಯ ರಕ್ಷಣೆ, ಪರಿಸರದ ಕಾಳಜಿಯನ್ನು ಕೇವಲ ಅರಣ್ಯ ಇಲಾಖೆ ಮಾಡಿದರೆ ಸಾಲದು. ಸಾರ್ವಜನಿಕರು ಆಸಕ್ತಿಯಿಂದ ಈ ಕಾರ್ಯದಲ್ಲಿ ಭಾಗವಹಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
  ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹಾರ್ನ್ ಬಿಲ್ ಹಬ್ಬದ ಸಮಾರೋಪದಲ್ಲಿ ಅವರು ಮಾತನಾಡಿದರು. ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ಮಾತನಾಡಿ, ಹಾರ್ನ್​ಬಿಲ್ ಹಬ್ಬದಲ್ಲಿ 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಹಾರ್ನ್ ಬಿಲ್ ಹಬ್ಬವನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
  ಡಾ. ಪ್ರಶಾಂತಕುಮಾರ ಕೆ.ಸಿ. ಮಾತನಾಡಿ, ಹಾರ್ನಬಿಲ್ ಪಕ್ಷಿಯ ರಕ್ಷಣೆ ದೃಷ್ಟಿಯಿಂದ ಹಾರ್ನ್ ಬಿಲ್ ಪಕ್ಷಿ ಗೂಡು ರಕ್ಷಣೆ, ಗೂಡು ದತ್ತು ಸ್ವೀಕಾರ ಮಾಡಿದವರನ್ನು ಗುರುತಿಸಿ ಅವರಿಗೆ ಮುಂಬರುವ ಹಾರ್ನ್​ಬಿಲ್ ಹಬ್ಬದಲ್ಲಿ ಗೌರವಿಸಲಾಗುವುದು ಎಂದರು.
  ಪಕ್ಷಿ, ಪ್ರಾಣಿ ರಕ್ಷಣೆ ನಿಸರ್ಗದ ಅಧ್ಯಯನ ಹಾಗೂ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಕಾರ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ವಿವಿಧ ಸ್ಪರ್ಧೆ ವಿಜೇತರಿಗೆ ಶಾಸಕರು ಪ್ರಶಸ್ತಿ ಪತ್ರ ನೀಡಿದರು.
  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ, ಮಾರಿಯಾ ಕ್ರೈಸ್ತರಾಜ, ಡಿಸಿಎಫ್ ನೀಲೇಶ ಶಿಂಧೆ ದೇವಬಾ, ಹರ್ಷ ಭಾನು, ಇದ್ದರು. ಎಸಿಎಫ್ ಸಂತೋಷ ಚವ್ಹಾಣ, ಮೇಘಾ ಪಾಟೀಲ ಹಾಗೂ ಕೆ.ಡಿ. ನಾಯ್ಕ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts