blank

‘ಅಪ್ಪು ಬಯೋಪಿಕ್, ವರ್ಷಕ್ಕೊಂದು ಹಾಡು’: ಪುನೀತ್ ಅಭಿಮಾನಿಗಳಿಗೀಗ ಈ ನಿರ್ದೇಶಕರಿಂದ ‘ಸಂತೋಷ-ಆನಂದ’..

blank

ಬೆಂಗಳೂರು: ಸ್ಯಾಂಡಲ್​ವುಡ್​ ಪವರ್ ಸ್ಟಾರ್ ನಟ ಪುನೀತ್ ರಾಜಕುಮಾರ್​ ತಮ್ಮ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಅಜರಾಮರ. ಅವರ ನೆನಪು ಎಲ್ಲರಲ್ಲಿ ಸದಾ ಕಾಲ ಇರಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಅಪ್ಪು ಅವರ ಸಿನಿಮಾಗಳಿಂದ ಹಿಡಿದು, ಸಮಾಜ ಸೇವೆಯು ಸಹ ಯುವ ಪೀಳಿಗೆಗೆ ಪ್ರೇರಣೆ ಎಂದೇ ಹೇಳಬೇಕು. ಅಭಿಮಾನಿಗಳ ಪ್ರೀತಿಯ ಅಪ್ಪು ಅಗಲಿ 24 ದಿನಗಳು ಕಳೆದರೂ ಜನರಿಗೆ ಮಾತ್ರ ಇದು ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಇದೀಗ, ಅಪ್ಪು ಅಭಿಮಾನಿಗಳ ಹೊಸ ಆಸೆಯೊಂದನ್ನು ಕನ್ನಡ ಚಿತ್ರರಂಗದ ನಿರ್ದೇಶಕ ಸಂತೋಷ್ ಆನಂದರಾಮ್​ ಅವರು ಈಡೇರಿಸಬೇಕಿದೆ.

ಹೌದು, ಅಭಿಮಾನಿಯೊಬ್ಬರು ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್​ ಬಳಿ ಹೊಸದೊಂದು ಆಸೆ ಇಟ್ಟಿದ್ದು, ಆ ಬಗ್ಗೆ ಸಂತೋಷ್ ಸಹ ಒಪ್ಪಿ ಅಭಿಮಾನಿಗಳ ಆಸೆ ಈಡೇರಿಸುವುದಾಗಿ ಮಾತು ಕೊಟ್ಟಿದ್ದಾರೆ.

ಪುನೀತ್ ಅವರ ಬಯೋಪಿಕ್ ಮಾಡಿದರೆ, ತಮ್ಮ ಜೀವನ ಪೂರ್ತಿ ಆ ಸಿನಿಮಾ ನೋಡುತ್ತ ಪುನೀತ್ ಅವರನ್ನು ನೆನಪಿಸಿಕೊಂಡು ಬದುಕ ಬಹುದೆಂದು ಅಭಿಮಾನಿಗಳು ಬಯಸಿದ್ದಾರೆ. ಹಾಗಾಗಿ, ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್​ ಬಳಿ ಪುನೀತ್ ಬಯೋಪಿಕ್ ಮಾಡಲು ವಿನಂತಿಸಿದ್ದಾರೆ. ಟ್ವಿಟರ್ ಮೂಲಕ ವಿನಂತಿಸಿದ ಅಭಿಮಾನಿಗಳಿಗೆ ನಿರ್ದೇಶಕ ಸಂತೋಷ್ ಆನಂದರಾಮ್​ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಈ ಸಮಯದಲ್ಲಿ ಮಲಗಿದರೆ ಹೃದಯಾಘಾತ ಸಾಧ್ಯತೆ ಕಡಿಮೆ ಅಂತೆ; ಅಧ್ಯಯನದಲ್ಲಿ ಬಯಲಾಯಿತು ಹೃದಯದ ಆರೋಗ್ಯ ಮಾಹಿತಿ

ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, 1000ಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, 180ಕ್ಕೂ ಹೆಚ್ಚು ಸಲ ರಿ-ಟ್ವೀಟ್​ ಆಗಿದೆ. ಅಲ್ಲದೆ ಅಪ್ಪು ಅವರಿಗೆಂದು ವರ್ಷಕ್ಕೊಂದು ಹಾಡು ಮಾಡಬೇಕು ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಆ ಹಾಡುಗಳೇ ಪುನೀತ್ ಅಭಿಮಾನಿಗಳಿಗೆ ಒಂದು ಆ್ಯಂಥೆಮ್ ಅಥವಾ ‘ಅಭಿಮಾನದ ಗೀತೆ’ಗಳಾಗಿ ಉಳಿಯುತ್ತವೆ ಎಂದು ಟ್ವೀಟ್​ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಒತ್ತಾಸೆಗೂ ಮಣಿದ ನಿರ್ದೇಶಕ ಸಂತೋಷ್ ಆನಂದರಾಮ್​ 1000% ಪಕ್ಕಾ ಅಭಿಮಾನಿಗಳು ಹೇಳಿದಂತೆ ಹಾಡುಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಟ್ವೀಟ್​ ವೈರಲ್, ಟ್ರೆಂಡಿಂಗ್ ಆಗುತ್ತಿವೆ.

ಇದನ್ನೂ ಓದಿ: ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

ಅಂದಹಾಗೆ, ನಿರ್ದೇಶಕ ಸಂತೋಷ್ ಆನಂದ್ರಾಮ್ ಮತ್ತು ಪುನೀತ್ ರಾಜಕುಮಾರ್ ಅವರ ನಂಟನ್ನು ವರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ನಟ ಪುನೀತ್ ಜೊತೆ ಸಂತೋಷ್ ‘ರಾಜಕುಮಾರ’ ಮತ್ತು ‘ಯುವರತ್ನ’ ಸಿನಿಮಾ ಮಾಡಿದ್ದು, ಆ ಎರಡೂ ಚಿತ್ರಗಳನ್ನು ಅಭಿಮಾನಿಗಳು ಹಾಡಿ, ಹೊಗಳಿ, ಕೊಂಡಾಡಿದ್ದಾರೆ. ಈ ಸಿನಿಮಾಗಳು ಸಿಕ್ಕಾಪಟ್ಟೆ ಸೂಪರ್ ಹಿಟ್ ಆಗಿದ್ದು, ಬಾಕ್ಸ್ ಆಫೀಸ್​ಗಳಲ್ಲಿ ಬಹಳಷ್ಟು ದಾಖಲೆಗಳನ್ನು ಬರೆದಿವೆ. ‘ರಾಜಕುಮಾರ’ ಮತ್ತು ‘ಯುವರತ್ನ’ ಸಿನಿಮಾಗಳ ಹಾಡುಗಳನ್ನು, ಅದರಲ್ಲೂ ‘ಬೊಂಬೆ ಹೇಳುತೈತೆ’ ಹಾಡು ಅಪ್ಪು ಅಭಿಮಾನಿಗಳಿಗೆ ‘ಅಭಿಮಾನದ ಗೀತೆ’ ಎಂದರೆ ತಪ್ಪಾಗಲಾರದು. ಹೀಗಾಗಿ, ಅಭಿಮಾನಿಗಳು ತಮ್ಮ ಆಸೆಗಳನ್ನು ಈಡೇರಿಸಲು ನಿರ್ದೇಶಕ ಸಂತೋಷ್ ಆನಂದರಾಮ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಬಹುದು. ಇನ್ನು ಅಪ್ಪು ಅಭಿಮಾನಿಗಳ ಒತ್ತಾಸೆಗಳಿಗೆ ಮಣಿದು ಅವರ ಆಸೆಗಳನ್ನು ಸಂತೋಷ್ ಒಪ್ಪಿಕೊಂಡಿದ್ದು ಎಲ್ಲರ ಸಂತಸಕ್ಕೆ ಕಾರಣವಾಗಿದೆ.

'ಅಪ್ಪು ಬಯೋಪಿಕ್, ವರ್ಷಕ್ಕೊಂದು ಹಾಡು': ಪುನೀತ್ ಅಭಿಮಾನಿಗಳಿಗೀಗ ಈ ನಿರ್ದೇಶಕರಿಂದ 'ಸಂತೋಷ-ಆನಂದ'.. 'ಅಪ್ಪು ಬಯೋಪಿಕ್, ವರ್ಷಕ್ಕೊಂದು ಹಾಡು': ಪುನೀತ್ ಅಭಿಮಾನಿಗಳಿಗೀಗ ಈ ನಿರ್ದೇಶಕರಿಂದ 'ಸಂತೋಷ-ಆನಂದ'..

ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…